twitter

    ಪ್ರಿಯಾಂಕ ಚಿಂಚೋಳಿ ಜೀವನಚರಿತ್ರೆ

    ಪ್ರಿಯಾಂಕಾ ಚಿಂಚೋಳಿ ಕನ್ನಡ ಉದಯೋನ್ಮುಖ ನಟಿ. ಮನಸೆಲ್ಲ ಧಾರಾವಾಹಿಯ ಮೂಲಕ ಚಿರಪರಿಚಿತರು. ಪ್ರಿಯಾಂಕಾ ಏಪ್ರಿಲ್ 29, 1993 ರಂದು ಕರ್ನಾಟಕದ ಗುಲ್ಬರ್ಗಾದಲ್ಲಿ ಜನಿಸಿದರು. ಅವರು ಗುಲ್ಬರ್ಗಾದ ಸೇಂಟ್ ಜೋಸೆಫ್ ಕಾನ್ವೆಂಟ್ ಗರ್ಲ್ಸ್ ಬಿಗ್ ಸ್ಕೂಲ್‌ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಬೆಂಗಳೂರಿನಲ್ಲಿ ತಮ್ಮ ಕಾಲೇಜು ಪದವಿಯನ್ನು ಪೂರ್ಣಗೊಳಿಸಿದರು.

    ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಹರ ಹರ ಮಹಾದೇವ' ಧಾರಾವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಈ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರವನ್ನು ನಿರ್ವಹಿಸಿದ್ದರು. ಅವರು ಉದಯ ಟಿವಿಯಲ್ಲಿನ ಪ್ರಸಿದ್ಧ ಕನ್ನಡ ಧಾರಾವಾಹಿಗಳಾದ ಜೈ ಹನುಮಾನ್ ಮತ್ತು ಮನಸಾರೆ ಮತ್ತು ಸ್ಟಾರ್ ಸುವರ್ಣದಲ್ಲಿ ಮನಸೆಲ್ಲಾ ನೀನೆಯಲ್ಲಿ ನಟಿಸಿದ್ದಾರೆ.

    ಸಿನಿಜೀವನ: ಪ್ರಿಯಾಂಕಾ ಚಿಂಚೋಳಿ ಅವರು ಶ್ರೀನಿವಾಸ ಸಿ. ಮಂಡ್ಯ ನಿರ್ದೇಶನದ ಬಿಲ್ ಗೇಟ್ಸ್ ಸಿನಿಮಾದ ಮೂಲಕ  ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. 
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X