ಪ್ರಿಯಾಂಕ ಉಪೇಂದ್ರ ಇವರು ಜನಿಸಿದ್ದು ಕೋಲ್ಕತದಲ್ಲಿ. ಇವರು ಪಕ್ಕ ಬಂಗಾಳಿ ಕುಟುಂಬದವರು. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಕೋಲ್ಕತದಲ್ಲಿ.
ಬಂಗಾಳಿ ಬೆಡಗಿ ಪ್ರಿಯಾಂಕ ತ್ರಿವೇದಿ ಮಾಡೆಲಿಂಗ್ ನಲ್ಲಿ ಆಸಕ್ತಿ ತೋರಿ 1996 ರಲ್ಲಿ ಮಿಸ್ ಕೊಲ್ಕತ್ತಾ ಆಗಿ ಹೊರ ಬಂದರು.ನಂತರ ಇವರಿಗೆ ಅನೇಕ ಸಿನೆಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಲಭಿಸುತ್ತದೆ. ಕನ್ನಡ, ತಮಿಳ್,ತೆಲುಗು, ಬೆಂಗಾಲಿ, ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಸೈ ಅನಿಕೊಂಡರು ಪ್ರಿಯಾಂಕ ತ್ರಿವೇದಿ.
ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಉಪೇಂದ್ರ ಅವರನ್ನು ವಿವಾಹವಾಗುತ್ತಾರೆ. ನಂತರ ಇವರ ನಾಮಧೇಯವನ್ನು ಪ್ರಿಯಾಂಕ ಉಪೇಂದ್ರವಾಗಿ ಬದಲಿಸಿಕೊಳ್ಳುತ್ತಾರೆ.
ನಾಯಕಿಯಾಗಿ ಮಾತ್ರವಲ್ಲದೆ ನಿರ್ಮಪಾಕರಾಗಿಯೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.