ಪುನೀತ್ ಇಸ್ಸಾರ್ ಜೀವನಚರಿತ್ರೆ

  ಪುನೀತ್ ಇಸ್ಸಾರ್ ಹಿಂದಿ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಖ್ಯಾತ ಖಳನಾಯಕ. ಇವರು ಬಿ.ಆರ್.ಚೋಪ್ರಾ ನಿರ್ದೇಶನದ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಮಹಾಭಾರತ' ಧಾರಾವಾಹಿಯಲ್ಲಿ ಧುರ್ಯೋಧನನ ಪಾತ್ರದ ಮೂಲಕ ತುಂಬಾ ಪ್ರಸಿದ್ಧಿ ಪಡೆದರು.

  ತಮ್ಮ ಮೊದಲ ಚಿತ್ರವಾದ ಕೂಲಿ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಾಹಸ ದೃಶ್ಯವೊಂದರ ಶೂಟಿಂಗ್ ಸಮಯದಲ್ಲಿ ಎಡವಟ್ಟಿನಿಂದಾಗಿ ಪುನೀತ್ ಅಮಿತಾಭ್ ಹೊಟ್ಟೆಗೆ ಸ್ವಲ್ಪ ಜೋರಾಗಿ ಹೊಡೆದಾಗ ಅಮಿತಾಭ್ ಆಯ ತಪ್ಪಿ ಬಿದ್ದು ತಮ್ಮ ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದರು. ಈ ಗಾಯದಿಂದ ಅಮಿತಾಬ್ ಆರು ತಿಂಗಳ ಕಾಲ ವಿಶ್ರಾಂತಿ ಪಡೆಯಬೇಕಾಯಿತು. ಈ ಘಟನೆ ಪುನೀತ್ ಜೀವನಕ್ಕೆ ಕಪ್ಪು ಚುಕ್ಕೆಯಾಯಿತು. ಕನ್ನಡದಲ್ಲಿ ವಿಷ್ಣುವರ್ಧನ್ ರ `ವಿಷ್ಣು-ವಿಜಯ್' ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಹಾಗೇ ಸಲ್ಮಾನ್ ಖಾನ್ ರ ಗರ್ವ ಚಿತ್ರ ಸೇರಿದಂತೆ ಕೆಲ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X