ಆರ್ ಚಂದ್ರು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ. ಇವರು 1980ರ ಫೆಬ್ರವರಿ 7ರಂದು ಚಿಕ್ಕಬಳ್ಳಾಪುರದ ಕೇಶವವರದಲ್ಲಿ ಜನಿಸಿದರು.
ಸಿನಿಜೀವನ
ಆರ್ ಚಂದ್ರು ಆರಂಭದಲ್ಲಿ ಹಿರಿಯ ನಿರ್ದೇಶಕ ಎಸ್ ನಾರಾಯಣ್ ಅವರ ಜೊತೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ನಂತರ ೨೦೦೮ರಲ್ಲಿ 'ತಾಜ್ ಮಹಲ್' ಚಿತ್ರಕ್ಕೆ ಅಕ್ಷನ್ ಕಟ್ ಹೇಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಎಂಟ್ರಿಕೊಟ್ಟರು.
ಈ ಸಿನಿಮಾ ಸೂಪರ್ ಹಿಟ್ ಆಯಿತು. ನಂತರ ಮೈಲಾರಿ, ಪ್ರೇಮ್ ಕಹಾನಿ, ಕೋ ಕೋ, ಚಾರ್ ಮಿನಾರ್, ಬ್ರಹ್ಮ, ಮಳೆ, ಲಕ್ಷಣ, ಕನಕ, ಐ ಲವ್ ಯೂ, ಕಬ್ಜ ಹೀಗೆ ಅನೇಕ ಸಿನಿಮಾಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ.