X
ರಕ್ಷಿತ್ ಶೆಟ್ಟಿ
Actor/Director/Producer

ರಕ್ಷಿತ್ ಶೆಟ್ಟಿ ಜೀವನ ಚರಿತ್ರೆ

ಸಿಂಪಲ್ ಸ್ಟಾರ್ ಅಂತಲೇ ಖ್ಯಾತಿ ಪಡೆದಿರುವ ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ ಮತ್ತು ಯುವ ನಿರ್ದೇಶಕ. ಇವರು 6 ಜೂನ್ 1983ರಂದು ಉಡುಪಿಯಲ್ಲಿ ಜನಿಸಿದರು. ಎನ್.ಎಮ್.ಎ.ಎಮ್.ತಾಂತ್ರಿಕ ಮಹಾವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಪಡೆದಿರುವ ರಕ್ಷಿತ್, ಚಿತ್ರರಂಗಕ್ಕೂ ಬರುವ ಮುನ್ನ ಎರಡು ವರ್ಷ ಸಾಫ್ಟವೇರ್ ಉದ್ಯೋಗಿಯಾಗಿ ಕೆಲಸ ಮಾಡಿದ್ದರು.


ಸಿನಿಜೀವನ: ರಕ್ಷಿತ್ ಶೆಟ್ಟಿ 2010ರಲ್ಲಿ ತೆರೆಕಂಡ `ನಮ್ ಏರಿಯಾದಲ್ಲೊಂದು ದಿನ' ಚಿತ್ರದ ಮೂಲಕ ಸಿನಿಪ್ರವೇಶ ಮಾಡಿದರು. ಆದರೆ, ರಕ್ಷಿತ್‌ಗೆ ಬ್ರೇಕ್ ನೀಡಿದ ಚಿತ್ರ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'.  ಕಡಿಮೆ ಬಜೆಟ್‌ನಲ್ಲಿ ಉತ್ತಮ ಕತೆಯೊಂದಿಗೆ ತಯಾರಾದ ಈ ಚಿತ್ರ ರಕ್ಷಿತ್ ಸಿನಿಜೀವನಕ್ಕೆ ಉತ್ತಮ ಅಡಿಪಾಯ ಹಾಕಿತು. ನಂತರ ಉಳಿದವರು ಕಂಡಂತೆ ಚಿತ್ರದ ಮೂಲಕ ನಿರ್ದೇಶಕರಾದರು. ನಿರ್ಮಾಪಕನಾಗಿಯೂ ಸಕ್ರಿಯವಾಗಿರುವ ಇವರು, ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಶನ್ ನೊಗರಾಜ್, 777 ಚಾರ್ಲಿ, ಸಪ್ತ ಸಾಗಾರದಾಚೆ ಎಲ್ಲೋ ಚಿತ್ರಗಳನ್ನು ನಿರ್ಮಿಸಿದ್ದಾರೆ. 777 ಚಾರ್ಲಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. 


ಬ್ರೇಕಪ್: ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಜೊತೆ 2017ರ ಜುಲೈ 3ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಪರಸ್ಪರ ಭಿನ್ನಾಭಿಪ್ರಾಯಗಳಿಂದ ಈ ಜೋಡಿ ಬೇರ್ಪಟ್ಟಿತು.





 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+