ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಡ್ಡ ಪ್ರವೀಣ್ ಪಾತ್ರದ ಮೂಲಕ ಮನೆಮಾತಾಗಿರುವ ರಂಜನ್ ಮೂಲತಃ ಕಾಸರಗೋಡಿನವರು. ತಂದೆ ರಾಜಕುಮಾರ್ ಬೈಕ್ ಶೀ ರೂಮಿನಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಸುಜಾತಾ ಬ್ಯೂಟಿಷನ್.
ಕಾಸರಗೋಡಿನಲ್ಲಿ ಚಿತ್ರದ ಅಡಿಷನ್ ನೆಡೆಯುವಾಗ ತನ್ನಿಬ್ಬರ ಸ್ನೇಹಿತರೊಂದಿಗೆ ಕುತೂಹಲದಿಂದ ಸೆಲ್ಫಿ ತೆಗೆದುಕೊಳ್ಳಲು ಹೋದ ರಂಜನ್ ಚಿತ್ರದ ಆಡಿಷನ್‌ನಲ್ಲಿ ಭಾಗವಹಿಸಿದರು. ಅಡಿಷನ್‌ನಲ್ಲಿ ಆಯ್ಕೆಯಾದ ರಂಜನ್‌ಗೆ ಚಿತ್ರತಂಡ ವರ್ಕಶಾಪ್ ಮುಖಾಂತರ ನಟನೆ ತರಬೇತಿ ನೀಡಿತು. ಚಿತ್ರದ ಪ್ರವೀಣ್ ಪಾತ್ರದಲ್ಲಿ ಮಿಂಚಿದ ರಂಜನ್ ಪ್ರೇಕ್ಷಕರ ಮನಗೆದ್ದರು. ಈ ಚಿತ್ರದ ನಂತರ `ಅಭಯ ಹಸ್ತ' ಚಿತ್ರದಲ್ಲಿ ನಟಿಸಿದರು.