X
ರಶ್ಮಿಕಾ ಮಂದಣ್ಣ
Actress

ರಶ್ಮಿಕಾ ಮಂದಣ್ಣ ಜೀವನ ಚರಿತ್ರೆ

ರಶ್ಮಿಕಾ ಮಂದಣ್ಣ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಕನ್ನಡ ಕಿರಿಕ್ ಪಾರ್ಟಿ ಮೂಲಕ ನಟನೆಗೆ ಎಂಟ್ರಕೊಟ್ಟ ಇವರು, ನ್ಯಾಷನಲ್ ಕ್ರಶ್ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ.


ಆರಂಭಿಕ ಜೀವನ

ರಶ್ಮಿಕಾ 1996ರ ಏಪ್ರಿಲ್ 5ರಂದು ಕೊಡುಗು ಜಿಲ್ಲೆಯ ವಿರಾಜಪೇಟೆಯಲ್ಲಿ ಜನಿಸಿದರು. ಇವರ ತಂದೆ ಸುಮನ್ ಮಂದಣ್ಣ ಮತ್ತು ತಾಯಿ ಮದನ್ ಮಂದಣ್ಣ. ರಶ್ಮಿಕಾಗೆ ಪುಟಾಣಿ ತಂಗಿಯಿದ್ದು, ಅವರ ಹೆಸರು ಶಿಮನ್ ಮಂದಣ್ಣ.  ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಬಾಲ್ಯ ವಿದ್ಯಾಭ್ಯಾಸ ಮುಗಿಸಿದ ಇವರು, ಮೈಸೂರಯ ಇನ್ಸ್‌ಟ್ಯೂಟ್ ಆಫ್ ಕಾಮರ್ಸ್‌ನಲ್ಲಿ ಪಿಯುಸಿ ಮುಗಿಸಿದರು. ನಂತರ ಎಂ ಎಸ್ ರಾಮಯ್ಯ ಆರ್ಟ್ಸ್, ಕಾಮರ್ಸ್ ಆಂಡ್ ಸೈನ್ಸ್ ಕಾಲೇಜಿನಲ್ಲಿ ಸೈಕಾಲಜಿ, ಜರ್ನಲಿಸಂ ಹಾಗೂ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು. 


ಮಾಡೆಲಿಂಗ್

ರಶ್ಮಿಕಾ ಕಾಲೇಜು ಓದುವ ಸಲುವಾಗಿ ಬೆಂಗಳೂರಿಗೆ ಬಂದರು. ಈ ವೇಳೆ 2014ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೂ ಕಾಲಿಟ್ಟರು. ಬೆಂಗಳೂರಿನ ಅನೇಕ Ramp ಶೋ ಕಾರ್ಯಕ್ರಮದಲ್ಲಿ ರಶ್ಮಿಕಾ ಭಾಗವಹಿಸಿದ್ದರು. ಅದೇ ವರ್ಷ ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಪ್ರಶಸ್ತಿಯನ್ನು ಪಡೆದರು. ಜೊತೆಗೆ  ಕ್ಲೀನ್ ಅಂಡ್ ಕ್ಲಿಯರ್ ಬ್ರಾಂಡ್‌ನ ಅಂಬಾಸಿಡರ್ ಆಗಿದ್ದರು.


ಸಿನಿಮಾರಂಗ 

ಈ ಸಂದರ್ಭದಲ್ಲಿ ಕಿರಿಕ್ ಪಾರ್ಟಿ ಸಿನಿಮಾತಂಡ ನಾಯಕಿಯ ಹುಡುಕಾಟದಲ್ಲಿತ್ತು. ಫೇಸ್‌ಬುಕ್‌ನಲ್ಲಿ ರಶ್ಮಿಕಾ ಫೋಟೋ ನೋಡಿದ ರಿಷಭ್ ಶೆಟ್ಟಿ ಹಾಗೂ ರಕ್ಷಿತ್, ತಮ್ಮ ಸಿನಿಮಾಗೆ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. 2015ರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಶ್ಮಿಕಾ, ಸಾನ್ವಿ ಪಾತ್ರದ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು. ಈ ಚಿತ್ರದ ನಟನೆಗಾಗಿ ಸೈಮಾ ಅವಾರ್ಡ್ ಕೂಡ ಪಡೆದರು. ನಂತರ ಅಂಜನಿ ಪುತ್ರ, ಚಮಕ್, ಯಜಮಾನ, ಪೊಗರು ಸಿನಿಮಾಗಳಲ್ಲಿ ನಟಿಸಿದರು. ನಂತರ ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟ ರಶ್ಮಿಕಾ, ಗೀತ ಗೋವಿಂದಂ, ಚಲೋ, ದೇವದಾಸ್ ಚಿತ್ರಗಳ ಮೂಲಕ ಪ್ರಸಿದ್ದಿ ಪಡೆದರು. ಸದ್ಯ ತೆಲುಗು, ತಮಿಳು ಹಾಗೂ ಬಾಲಿವುಡ್‌ ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದಾರೆ. 


ನಿಶ್ಚಿತಾರ್ಥ: 2017ರ ಜುಲೈ 5ರಂದು ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅದ್ಧೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಬಳಿಕ ಇವರಿಬ್ಬರ ನಡುವೆ 14 ವರ್ಷಗಳ ಅಂತರವಿದೆ ಎಂಬ ವಿಚಾರ ಸದ್ದು ಮಾಡಿತ್ತು. ಆದರೆ, ಈ ಜೋಡಿ ಇದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ. 2018ರ ಅಕ್ಟೋಬರ್ ತಿಂಗಳಲ್ಲಿ ರಶ್ಮಿಕಾ ಅವರು ರಕ್ಷಿತ್ ಜೊತೆಗಿನ ನಿಶ್ಚಿತಾರ್ಥ ಮುರಿದುಕೊಂಡಿದ್ದರು. ಎಂಗೇಜ್ಮೆಂಟ್ ಆದಾಗ ರಶ್ಮಿಕಾಗೆ 20 ವರ್ಷ ವಯಸ್ಸಾಗಿತ್ತು.  

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+