ರವಿಶಂಕರ್ ಪಿ ಜೀವನಚರಿತ್ರೆ

  ರವಿಶಂಕರ್ ಪಿ ಇವರು ಹುಟ್ಟಿದ್ದು ಆಂದ್ರಪ್ರದೇಶದಲ್ಲಿ. ಆದರೆ  ಬೆಳೆದಿದ್ದು ಮಾತ್ರ ಚನ್ನೈನಲ್ಲಿ. ಇವರ ತಂದೆ ಪಿ.ಜೆ ಶರ್ಮ, ಇವರು ಡಬ್ಬಿಂಗ್ ಆರ್ಟಿಸ್ಟ್  ಆಗಿ ಕನ್ನಡ, ತೆಲುಗು, ತಮಿಳು ಚಿತ್ರ ರಂಗದಲ್ಲಿ ಕೆಲಸ ಮಾಡಿದ್ದಾರೆ.

  ರವಿಶಂಕರ್ ಸಹ ವಿವಿಧ ಬಾಷೆಗಳ ಚಿತ್ರರಂಗದಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿ  ಗುರುತಿಸಿಕೊಂಡಿದ್ದಾರೆ. ರವಿಶಂಕರ್ ಅವರು ಪಂಜಾಬಿಯ ಸುಚಿಲ್ ಎನ್ನುವರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ.

  1986ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ ಇವರು ಕನ್ನಡ, ತೆಲುಗು, ತಮಿಳು  ಭಾಷೆಗಳ ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ, ಡಬ್ಬಿಂಗ್  ಆರ್ಟಿಸ್ಟ್ ಆಗಿದ್ದಾರೆ. 2009 ರಲ್ಲಿ ಇವರು ಮೊದಲ ಬಾರಿಗೆ ಅರುಂದತಿ ಚಿತ್ರವನ್ನು ಡಬ್ಬಿಂಗ್ ಮಾಡಿದ್ದಾರೆ.

  "ಹಳ್ಳಿ ಕೃಷ್ಣ ಡೆಲ್ಲಿ ರಾಧೆ" ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, ತದನಂತರ 'ಮನಮೆಚ್ಚಿದ ಸೊಸೆ', 'ಕೋಟೆ' ಚಿತ್ರದಲ್ಲಿ ಮಿಂಚಿ ವಾಯ್ಸ್ ಆರ್ಟಿಸ್ಟ್ ಆಗಿ ಉಳಿದವರು ನಟ ರವಿಶಂಕರ್.

  ಆದರೆ ಸುದೀಪ್ ಅವರ ಜೊತೆ 'ಕೆಂಪೇಗೌಡ' ಚಿತ್ರದಲ್ಲಿ 'ಆರ್ಮುಗಂ' ನಾಗಿ ಅಬ್ಬರಿಸಿ ಫೇಮಸ್ ಆದ ನಂತರ ಇದೀಗ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯ ಖಳನಟನಾಗಿ ಹೊರಹೊಮ್ಮಿ ಭರ್ಜರಿ 50 ಸಿನಿಮಾಗಳನ್ನು ಪೂರೈಸಿದ ಹೆಗ್ಗಳಿಕೆ ನಟ ರವಿಶಂಕರ್ ಅವರದು.

  ರವಿ ಶಂಕರ್ ಅವರು ನಟಿಸಿದ ಕನ್ನಡ ಸಿನಿಮಾಗಳು:-

  ಕೆಂಪೇಗೌಡ        ದಂಡಂ ದಶಗುಣಂ            ಶಕ್ತಿ
  ದಂಡುಪಾಳ್ಯ     ಎದೆಗಾರಿಕೆ            ಯಾರೇ ಕೂಗಾಡಲಿ
  ವರದನಾಯಕ     ಮೈನಾ                    ಟೋಪಿವಾಲ
  ಬಚ್ಚನ್             ವಿಕ್ಟೋರಿ                  ಘರ್ಷಣೆ
  ಮಾಣಿಕ್ಯ           ಅಧ್ಯಕ್ಷ                        ಶಿವಂ
  ಅಭಿನೇತ್ರಿ           ರಾಜ ರಾಜೆಂದ್ರ         ರುದ್ರತಾಂಡವ
  ಆಟಗಾರ         ಆರ್ ಎಕ್ಸ್ ಸೂರಿ          ಲವ್ ಯು ಆಲಿಯ
  ಪ್ಲಸ್                ರಥಾವರ                    ಮಾಸ್ಟರ್ ಪೀಸ್
  ಕಥೆ ಚಿತ್ರ ಕಥೆ ನಿರ್ದೇಶನ ಪುಟ್ಟಣ್ಣ           ವಿರಾಟ್
  ಅಪೂರ್ವ        ದೊಡ್ಮನೆ ಹುಡುಗ          ಮುಂಗಾರು ಮಳೆ-2
  ಜಿಗರ್ ಥಂಡ

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X