Celebs»Rekha Das»Biography

  ರೇಖಾ ದಾಸ್ ಜೀವನಚರಿತ್ರೆ

  ಚಂದನವನದಲ್ಲಿ ಬಣ್ಣದ ರಾಣಿ ಎಂದೇ ಕರೆಯಲ್ಪಡುವ ರೇಖಾ ದಾಸ್ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ. ತಮ್ಮ 14 ನೇ ವಯಸ್ಸಿನಲ್ಲಿಯೇ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ರೇಖಾರ ಮೊದಲ ಚಿತ್ರ ಟೈಗರ್ ಪ್ರಭಾಕರ್ ಅಭಿನಯದ `ಕಂಪನ'. ನಾಯಕನಟಿಯರ ಸ್ನೇಹಿತೆ ಪಾತ್ರದಲ್ಲಿ ನಟಿಸುತ್ತಿದ್ದ ಇವರಿಗೆ ಬ್ರೇಕ್ ಕೊಟ್ಟ ಚಿತ್ರ ಶಶಿಕುಮಾರ್ ಅಭಿನಯದ `ಬಾರೆ ನನ್ನ ಮುದ್ದಿನ ರಾಣಿ'. ಚಿತ್ರರಂಗ ಮಾತ್ರವಲ್ಲ ರಂಗಭೂಮಿ ಮತ್ತು ಕಿರುತೆರೆಯಲ್ಲೂ ತಮ್ಮ ಅಭಿನಯದ ಛಾಪನ್ನು ಮೂಡಿಸಿದ್ದಾರೆ. ತಮ್ಮ ವಿಭಿನ್ನ ಮೇಕ್-ಅಪ್ ಶೈಲಿಯಿಂದ ಗುರುತಿಸಿಕೊಳ್ಳುವ ಇವರು 100 ಚಿತ್ರಗಳಲ್ಲಿ ಟೆನ್ನಿಸ್ ಕೃಷ್ಣರವರ ಪತ್ನಿ ಪಾತ್ರದಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ.

  ಖ್ಯಾತ ನಿರ್ದೇಶಕ ಓಂ ಪ್ರಕಾಶ ರಾವ್ ಜೊತೆ ಮದುವೆಯಾಗಿದ್ದ ರೇಖಾರಿಗೆ ಶ್ರಾವ್ಯಾ ರಾವ್ ಎಂಬ ಪುತ್ರಿಯುಂಟು. ಶ್ರಾವ್ಯಾ ರಾವ್ ಪ್ರಸ್ತತ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 

  ಕಲಾ ಚಿತ್ರಣ

  ಕನ್ನಡ ಚಿತ್ರಗಳು - 680

  ತುಳು ಚಿತ್ರಗಳು - 3

  ನಾಟಕ ಪ್ರದರ್ಶನಗಳು - 6000

  ಆರ್ಕೆಸ್ಟ್ರಾ ಕಾರ್ಯಕ್ರಮಗಳು - 3000

  ಕಿರುತೆರೆ ಧಾರಾವಾಹಿಗಳು - 500

  ಹಾಸ್ಯ ಕಾರ್ಯಕ್ರಮಗಳು - 3500

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X