twitter
    Celebs»S Janaki»Biography

    ಎಸ್ ಜಾನಕಿ ಜೀವನಚರಿತ್ರೆ

    ಎಸ್ ಜಾನಕಿ ಭಾರತೀಯ ಚಿತ್ರರಂಗ ಕಂಡ ಅಧ್ಬುತ ಹಿನ್ನಲೆ ಗಾಯಕಿ, ಗೀತಸಾಹಿತಿ ಮತ್ತು ಸಂಗೀತ ನಿರ್ದೇಶಕಿ. ಕನ್ನಡ,ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಾವಿರಾರು ಗೀತೆಗೆಳಿಗೆ ಧ್ವನಿಯಾಗಿದ್ದಾರೆ. ತಮ್ಮ ಅದ್ಭುತ ಧ್ವನಿ ವೈವಿದ್ಯತೆಗೆ ಹೆಸರಾಗಿರುವ ಇವರು ಚಿಕ್ಕ ಮಕ್ಕಳಂತೆ ಕೂಡ ಹಾಡಬಲ್ಲರು.


    1938 ರಲ್ಲಿ ಆಂಧ್ರಪ್ರದೇಶದ ಗುಂಟೂರಿನ ಹಳ್ಳಿಯಲ್ಲಿ ಜನಿಸಿದರು. ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿಯಿದ್ದ ಜಾನಕಿಯವರು ನಾದಸ್ವರ ವಿದ್ವಾನ್ ಶ್ರೀ ಪೈಡಿಸ್ವಾಮಿಯವರ ಹತ್ತಿರ ಸಂಗೀತ ಕಲಿತರು.


    ಸಂಗಿತ ಪಯಣ

    ತಮ್ಮ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಗಾಯನ ಆರಂಭಿಸಿದ ಜಾನಕಿಯವರು ತಮ್ಮ ಚಿಕ್ಕಪ್ಪನ ಸಲಹೆಯಂತೆ ಚೆನ್ನೈಗೆ ಬಂದು ಎವಿಎಮ್ ಸ್ಟುಡಿಯೋದಲ್ಲಿ ಗಾಯಕಿಯಾಗಿ ಸೇರಿದರು.1957 ರಲ್ಲಿ ಚಿತ್ರಗಳಲ್ಲಿ ಹಾಡಲು ಆರಂಭಿಸಿದ ಜಾನಕಿ ಅದೇ ವರ್ಷದಲ್ಲಿ ಆರು ಬಾಷೆಗಳಲ್ಲಿ ಹಾಡಿದರು. ಸಂಗೀತ ನಿರ್ದೇಶಕ ಇಳಯರಾಜ ಮತ್ತು ಹಿನ್ನಲೆ ಗಾಯಕ ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ ಜೊತೆ ಅತಿ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ.


    ಕನ್ನಡದಲ್ಲಿ ಡಾ.ರಾಜಕುಮಾರ್ ಜೊತೆ ಅತಿ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಗೆ ಬಾಜನವಾಗಿರುವ ಜಾನಕಮ್ಮಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದ್ದಾರೆ. ಜಾನಕಿಯವರು 1959 ರಲ್ಲಿ ವಿ ರಾಮಪ್ರಸಾದ್‌ರನ್ನು ವಿವಾಹವಾದರು. 1997 ರಲ್ಲಿ ಪತಿಯ ಮರಣದ ನಂತರ ಪುತ್ರನ ಜೊತೆ ಹೈದರಾಬಾದಿನಲ್ಲಿ ನೆಲೆಸಿದ್ದಾರೆ. 

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X