X
ಎಸ್ ಮಹೇಂದರ್
Director/Lyricst/Actor

ಎಸ್ ಮಹೇಂದರ್ ಜೀವನ ಚರಿತ್ರೆ

ಎಸ್ .ಮಹೇಂದರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ ಮತ್ತು ನಟ. ಇವರು ಕೊಳ್ಳೇಗಾಲದ ಬಂಡಹಳ್ಳಿಯಲ್ಲಿ ಜನಿಸಿದರು. ಇವರು ಬಿಜೆಪಿ ಅಭ್ಯರ್ಥಿಯಾಗಿ ಕೊಳ್ಳೇಗಾಲ ಕ್ಷೇತ್ರದಿಂದ ಸ್ಫರ್ಧಿಸಿದ್ದರು.


1992 ರಲ್ಲಿ ತೆರೆಕಂಡ `ಪ್ರಣಯದ ಪಕ್ಷಿಗಳು' ಚಿತ್ರದಿಂದ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ `ತಾಯಿ ಇಲ್ಲದ ತಬ್ಬಲಿ' ,`ಶೃಂಗಾರ ಕಾವ್ಯ' ,`ಕರ್ಪೂರದ ಗೊಂಬೆ', `ಸ್ನೇಹಲೋಕ',`ಅಸುರ' `ವಾಲೀ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 1998 ರಲ್ಲಿ ತಮ್ಮ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ಶೃತಿಯವರನ್ನು ವಿವಾಹವಾದರು. ಈ ದಂಪತಿಗಳಿಗೆ ಗೌರಿ ಎಂಬ ಪುತ್ರಿಯಿದ್ದಾಳೆ. 2001 ರಲ್ಲಿ ತೆರೆಕಂಡ `ಗಟ್ಟಿಮೇಳ' ಚಿತ್ರದಲ್ಲಿ ಎಸ್ ಮಹೇಂದರ್ ಮತ್ತು ಶೃತಿ ತೆರೆಮೇಲೆ ಕೂಡ ದಂಪತಿಯಾಗಿ ನಟಿಸಿದ್ದರು.


2009 ರಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳಿಂದ ಶೃತಿ ಮತ್ತು ಮಹೇಂದರ್ ಡೈವೋರ್ಸ್ ಪಡೆದರು. ನಂತರ ಮಹೇಂದರ್ ಮೈಸೂರಿನಲ್ಲಿ ನೆಲೆಸಿರುವ ಯಶೋಧಾ ಎಂಬುವವರನ್ನು ವಿವಾಹವಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+