X
ಸಂಜನಾ ಗಲ್ರಾನಿ
Actress/Actor

ಸಂಜನಾ ಗಲ್ರಾನಿ ಜೀವನ ಚರಿತ್ರೆ

ಸಂಜನಾ ಗಲ್ರಾನಿ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಮಾಡೆಲ್. 20೦6 ರಲ್ಲಿ ತೆರಕಂಡ ತಮಿಳು ಚಿತ್ರದಿಂದ ಸಿನಿಪಯಣ ಆರಂಭಿಸಿದರೂ ಇವರಿಗೆ ಮೊದಲ ಮನ್ನಣೆ ತಂದು ಕೊಟ್ಟಿದ್ದು ಅದೇ ವರ್ಷ ತೆರೆಕಂಡ ಗಂಡ ಹೆಂಡತಿ ಚಿತ್ರ. ನಂತರ 2008 ರಲ್ಲಿ ಬುಜ್ಜಿಗಾಡು ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದರು. ಇದಕ್ಕೂ ಮೊದಲು ಬಾಲ ಕಲಾವಿದೆಯಾಗಿ ಒಂದೆರೆಡು ಚಿತ್ರಗಳಲ್ಲಿ ನಟಿಸಿದ್ದರು.

 

1988 ಆಕ್ಟೋಬರ್ 10 ರಂದು ಬೆಂಗಳೂರಿನಲ್ಲಿ ಸಿಂಧಿ ಕುಟುಂಬವೊಂದರಲ್ಲಿ ಜನಿಸಿದರು. ಬಾಲ್ಯದ ಹೆಸರು ಅರ್ಚನಾ. ಪಿಯುಸಿಯಿಂದಲೇ ಮಾಡೆಲಿಂಗ್ ಮಾಡಲು ಆರಂಭಿಸಿದ ಇವರು ಹಲವಾರು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡರು. ಫಾಸ್ಟ್ ಟ್ರ್ಯಾಕ್ ವಾಚಿನ ಜಾಹೀರಾತಿನಲ್ಲಿ ಬಾಲಿವುಡ್ ನಟ ಜಾನ್ ಅಬ್ರಾಹಂ ಜೊತೆ ಕಾಣಿಸಿಕೊಂಡರು.

ಗಂಡ ಹೆಂಡತಿ ಚಿತ್ರದ ನಂತರ ಹುಡುಗ ಹುಡುಗಿ, ಮೈಲಾರಿ, ಸಾಗರ್ ಮುಂತಾದ ಚಿತ್ರಗಳಲ್ಲಿ ನಟಿಸಿದರು. ದಂಡುಪಾಳ್ಯ 2 ರಲ್ಲಿ ಕೂಡ ನಟಿಸಿದ್ದರು.

 

ಬಿಗ್ ಬಾಸ್

ಕನ್ನಡ ಬಿಗ್ ಬಾಸ್ ಮೊದಲ ಸೀಸನ್ ಅಭ್ಯರ್ಥಿಯಾಗಿ ಸಂಜನಾ ಭಾಗವಹಿಸಿದ್ದರು. ಇದೇ ಸೀಸನ್ ನಲ್ಲಿ ಇವರ ಗಂಡ ಹೆಂಡಿತಿ ಚಿತ್ರದ ನಾಯಕ ತಿಲಕ್ ಕೂಡ ಭಾಗವಹಿಸಿದ್ದರು. ಹದಿಮೂರು ದಿನಗಳ ಕಾಲ ಬಿಗ್ ಬಾಸ್ ನಲ್ಲಿದ್ದರು

 

ಮೀಟೂ ವಿವಾದ

2018 ರಲ್ಲಿ ಗಂಡ ಹೆಂಡತಿ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಚಿತ್ರದಲ್ಲಿ ನಿರ್ದೇಶಕರು ಒತ್ತಾಯ ಪೂರ್ವಕವಾಗಿ ತಮ್ಮನ್ನು ಅಸಭ್ಯ ದೃಶ್ಯಗಳಲ್ಲಿ ನಟಿಸುವಂತೆ ಒತ್ತಾಯ ಮಾಡಿದ್ದರು ಎಂದು ಹೇಳಿಕೆ ನೀಡಿದ್ದರು. ನಂತರ ಕನ್ನಡ ಚಲನಚಿತ್ರ ಮಂಡಳಿಯ ಮೂಲಕ ಈ ವಿವಾದ ಬಗೆ ಹರಿಯುತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+