ಸಂಜಿತ್ ಹೆಗಡೆ ಜೀವನಚರಿತ್ರೆ

  ಭಾರತದ ಜಸ್ಟಿನ್ ಬೈಬರ್ ಎಂದೇ ಕರೆಸಿಕೊಳ್ಳೂವ ಸಂಜಿತ್ ಹೆಗಡೆ ಪಾಪ್ ಸಂಗೀತಲೋಕದಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿರುವ ಕನ್ನಡದ ಪ್ರತಿಭೆ. ಸರಿಗಮಪ ದಿಂದ ಹಿಡಿದು ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ತನ್ನ ಕಂಠದಿಂದಲೇ ಸದ್ದು ಮಾಡುತ್ತಿರುವ ಈ ಗಾಯಕ ಭಾರತದ ಹಲವು ನಗರಗಳಲ್ಲಿ ಮತ್ತು ವಿದೇಶದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾನೆ.

  ಬಾಲ್ಯ ಮತ್ತು ಸರಿಗಮಪ ಪಯಣ

  ಬೆಂಗಳೂರಿನಲ್ಲಿ ಜನಿಸಿದ ಸಂಜಿತ್ ಸಿ.ಎಮ್.ಆರ್.ಕಾಲೇಜಿನಿಂದ ಪಿಯುಸಿ ಮುಗಿಸಿ ಜೆ.ಎಸ್.ಎಸ್ ಇಂಜಿನಿಯರಿಂಗ್ ಕಾಲೇಜ್ ಸೇರಿದರು. ನಂತರ ಇಂಜಿನಿಯರಿಂಗ್ ಮಧ್ಯದಲ್ಲಿಯೇ ಬಿಟ್ಟು ಬಿ.ಬಿ.ಎ ಕೋರ್ಸ್ ಸೇರಿದರು.

  ಜೀ ಕನ್ನಡ ವಾಹಿನಿಯ ಸರಿಗಮಪ 13 ನೇ ಸೀಸನ್ ಅಭ್ಯರ್ಥಿಯಾಗಿ ಮುನ್ನಲೆಗೆ ಬಂದ ಸಂಜಿತ್ ದಳಪತಿ ಚಿತ್ರದ `ಗುನು ಗುನುಗುವ' ಹಾಡಿನಿಂದ ಪ್ರಸಿದ್ದರಾದರು. ಜೀ ತಮಿಳು ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿಯೂ ಹಾಡಿದ್ದಾರೆ. ಕೆಲವು ತೆಲಗು ಮತ್ತು ತಮಿಳು ಗೀತೆಗಳನ್ನು ಹಾಡಿರುವ ಇವರು `ಚಮಕ್' ಚಿತ್ರದ `ಕುಷ್ ಕುಷ್' ಹಾಡಿಗೆ ಗಾನಾ ಮಿರ್ಚಿ ಮ್ಯೂಸಿಕ್ ಅವಾರ್ಡ ಪಡೆದರು. ಪ್ರೇಮ ಗೀತೆಗಳಿಂದ ಹಿಡಿದು ಪಾಪ್ ಗೀತೆಗಳನ್ನು ಹಾಡುವ ಗುಂಗುರು ಕೂದಲಿನ ಸಂಜಿತ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕೂಡ ಬಲ್ಲರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X