ಮಹಾರಾಷ್ಟ್ರದ ಸತಾರಾ ಬಳಿಯಿರುವ ಒಂದು ಚಿಕ್ಕ ಹಳ್ಳಿಯಲ್ಲಿ ಜನಿಸಿದ ಸಯ್ಯಾಜಿ ಶಿಂಧೆ ಮೂಲತಃ ಮರಾಠಿ ಚಿತ್ರರಂಗದವರು.ಮರಾಠಿ ಭಾಷೆಯಲ್ಲಿ ಪದವಿ ಪಡೆದ ಶಿಂಧೆ ಮಹಾರಾಷ್ಟ್ರ ನೀರಾವರಿ ಇಲಾಖೆಯಲ್ಲಿ ವಾಚಮನ್ ಕೆಲಸ ಮಾಡುತ್ತಿದ್ದರು. ಮುಂದೆ ಅಭಿನಯದಲ್ಲಿ ಅಭಿರುಚಿ ಬೆಳೆಸಿಕೊಂಡ ಇವರು ಮರಾಠಿ ಚಿತ್ರ `ಶೋಲ್'ದಲ್ಲಿ ಅಭಿನಯಿಸಿದರು. ಶಿಂಧೆ ಸಿನಿ ಕೆರಿಯರ್ ಪ್ರಾರಂಭಿಸಿದ್ದು ಮರಾಠಿ ಚಿತ್ರದ ಮೂಲಕವಾದರೂ ಇವರಿಗೆ ಬಿಗ್ ಬ್ರೇಕ್ ನೀಡಿದ್ದು 2000ರಲ್ಲಿ ತೆರೆಗೆಬಂದ ತಮಿಳು ಚಿತ್ರ `ಭಾರತಿ'.ಈ ಚಿತ್ರವು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತು ಮತ್ತು ರಾಷ್ಟ್ರಪ್ರಶಸ್ತಿ ಪಡೆಯಿತು.ತಮಿಳು ಭಾಷೆ ಬರದಿದ್ದರೂ ಕೂಡ ತಮಿಳುನಾಡಿನ ಶ್ರೇಷ್ಠ ಸಾಹಿತಿ ಮತ್ತು ಕವಿ ಸುಬ್ರಮಣ್ಯಮ್ ಭಾರತಿಯವರ ಪಾತ್ರದಲ್ಲಿ ಶಿಂಧೆ ನೀಡಿದ ಅಭಿನಯ ಸಾಕಷ್ಟು ಪ್ರಶಂಸೆ ಪಡೆಯಿತು.
ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ `ಟ್ಯಾಗೋರ್' ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದರು.2004 ರಲ್ಲಿ ಪುನೀತ್ ಅಭಿನಯದ `ವೀರ ಕನ್ನಡಿಗ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.