ಸಯ್ಯೇಶಾ ಸೈಗಲ್ ಬಾಲಿವುಡ್ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟಿ. ಇವರು ಹಿಂದಿಯ ಖ್ಯಾತ ಚಿತ್ರ ತಾರೆ ಸೈರಾ ಭಾನು ಮತ್ತು ದೀಲಿಪಕುಮಾರ್ ರವರ ಮೊಮ್ಮಗಳು.
1997 ರಲ್ಲಿ ಸುಮೀತ್ ಸೈಗಲ್ ಮತ್ತು ಶಹೀನ್ ದಂಪತಿಗಳ ಪುತ್ರಿಯಾಗಿ ಮುಂಬೈನಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇಂಗ್ಲೆಂಡಿನಲ್ಲಿ ಮುಗಿಸಿ, ಪಿಯುಸಿಯನ್ನು ಮುಂಬೈನಲ್ಲಿ ಮುಗಿಸಿದರು.
ಬಾಲ್ಯದಿಂದಲೂ ಶಿಕ್ಷಣದಲ್ಲಿ ಚುರುಕಾಗಿದ್ದ ಆಯೇಶಾ , ತಮ್ಮ 10 ನೇ ವಯಸ್ಸಿನಿಂದಲೇ ಲಂಡನ್ನಿನಲ್ಲಿ ಲ್ಯಾಟಿನ್ ಅಮೇರಿಕಾ ಶೈಲಿಯಲ್ಲಿ ನೃತ್ಯ ತರಬೇತಿ ಪಡೆಯತೊಡಗಿದರು. ನಂತರ ರಿಯೋ ಡಿ ಜನೆರೋ ಮತ್ತು ದಕ್ಷಿಣ ಆಫ್ರಿಕಾಕ್ಕೆ ತೆರಳಿ ಇನ್ನಷ್ಟು ಹೆಚ್ಚಿನ ತರಬೇತಿ ಪಡೆದರು. ಓಡಿಸ್ಸಿ,ಕಥಕ್,ಬೆಲ್ಲಿ ಡ್ಯಾನ್ಸಿಂಗ್,ಹಿಪ್ ಹಾಪ್ ನೃತ್ಯಗಳಲ್ಲಿ ಪರಿಣಿತಿ ಹೊಂದಿದ್ದಾರೆ.
ಮುಂಬೈನಲ್ಲಿ ನೆಲೆಸಿರುವ ಇವರು 2015 ರಲ್ಲಿ ತೆರೆಕಂಡ ತೆಲುಗು ಚಿತ್ರ `ಅಕಿಲ್' ಮೂಲಕ ಸಿನಿಪಯಣ ಆರಂಭಿಸಿದರು. ನಂತರ ಅಜಯ ದೇವಗನ್‌ರ `ಶಿವಾಯ' ಚಿತ್ರದಲ್ಲಿ ಕೂಡ ನಟಿಸಿದರು. ಪುನೀತ್ ರಾಜಕುಮಾರ್‌ರವರ `ಯುವರತ್ನ' ಚಿತ್ರದ ಮೂಲಕ ಸಯ್ಯೇಶಾ ಕನ್ನಡ ಚಿತ್ರರಂಗ ಪ್ರವೇಶಿಸಲಿದ್ದಾರೆ.
ತಮಿಳು ನಟ ಆರ್ಯ ಜೊತೆ `ಘಜನಿಕಾಂತ' ಚಿತ್ರದಲ್ಲಿ ನಟಿಸಿದ ಇವರು ಆರ್ಯರನ್ನೇ ತಮ್ಮ ಬಾಳಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇವರು ಆರ್ಯರನ್ನು 2019 ಮಾರ್ಚ್‌ನಲ್ಲಿ ಮದುವೆಯಾಗುವ ನಿರೀಕ್ಷೆಯಿದೆ.