X
ಎಸ್.ಡಿ.ಅರವಿಂದ್
Director/Producer/Lyricst

ಎಸ್.ಡಿ.ಅರವಿಂದ್ ಜೀವನ ಚರಿತ್ರೆ

ಎಸ್.ಡಿ.ಅರವಿಂದ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ, ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಖ್ಯಾತ ಹಾಸ್ಯ ದಿಗ್ಗಜ ನರಸಿಂಹರಾಜುರವರ ಮೊಮ್ಮಗನಾಗಿರುವ ಇವರು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಸುಮಾರು ಒಂದು ದಶಕ ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಇವರು ಕಾರ್ಪೋರೇಟ್ ಜಾಹೀರಾತು ಚಿತ್ರಗಳನ್ನು ಮಾಡುತ್ತಿದ್ದರು. ನಂತರ ಜುಗಾರಿ ಚಿತ್ರದ ನಿರ್ಮಾಪಕರು ಒಂದು ಕಥೆ ಬರೆದು ನಿರ್ದೇಶಿಸೆಂದು ಹೇಳಿದಾಗ ಹುಟ್ಟಿದ್ದೇ `ಜುಗಾರಿ' ಚಿತ್ರ. ಈ ಚಿತ್ರದಲ್ಲಿ ಇವರ ಸಹೋದರ ಅವಿನಾಶ್ ಕೂಡ ಅಭಿನಯಿಸಿದ್ದರು.

ತಮ್ಮ ತಾತ ನರಸಿಂಹರಾಜುರವರ ನೆನಪಿನಲ್ಲಿ ಚಿಕ್ಕಮ್ಮನ ಜೊತೆ ಸೇರಿ `ಹಾಸ್ಯ ಚಕ್ರವರ್ತಿ' ಎಂಬ ಕಾರ್ಯಕ್ರಮವನ್ನು ಮಾಡಿದರು. ಇದು ದೂರದರ್ಶನ ವಾಹಿನಯಲ್ಲಿ ಪ್ರಸಾರವಾಯಿತು.

ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಮಾಣದ ಸಾಂಸ್ಕೃತಿಕ ದೃಶ್ಯ ಪತ್ರಿಕೆ `ಅವಲೋಕನ'ವನ್ನು ನಿರ್ದೇಶಿಸಿದ ಶ್ರೇಯ ಇವರಿಗೆ ಸಲ್ಲುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+