Celebs » Sharan » Biography
ಜೀವನಚರಿತ್ರೆ

ಶರಣ್ ಇವರು ಜನಿಸಿದ್ದು 06 ಫೆಬ್ರುವರಿ 1974 ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಭ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ. ಇವರ ಅಕ್ಕ ಶ್ರುತಿ ಆಗಲೇ ಚಿತ್ರರಂಗದಲ್ಲಿ ಒಳ್ಳೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಶರಣ್ ಅವರು ಚಿತ್ರರಂಗ ಪ್ರವೇಶಿಸುವ ಮೊದಲು ಆರ್ಕೆಸ್ಟ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ನಂತರ ೧೯೯೮ ರಲ್ಲಿ ಇವರು ಕನ್ನಡ ಚಿತ್ರರಂಗದಲ್ಲಿ ಅಭಿನಹಿಸುವ ಅವಕಾಶ ದೊರೆಯಿತು. ಫ್ರೆಂಡ್ಸ್ (೨೦೦೨) ಮೊನಾಲಿಸ (೨೦೦೪) ಜೊತೆ ಜೊತೆಯಲಿ (೨೦೦೬) ಪಲ್ಲಕ್ಕಿ (೨೦೦೭) ಮಳೆಯಲಿ ಜೊತೆಯಲಿ (೨೦೦೯) ಅನೇಕ ಚಿತ್ರ ಗಳಲ್ಲಿ ಹಾಸ್ಯ ನಟನಾಗಿ ಅಭಿನಹಿಸುವ ಅವಕಾಶಗಳು ದೊರೆತವು. ಹೀಗೆ ಕನ್ನಡ ಸಿನಿಮಾರಂಗದ ದಿಗ್ಗಜ ನಟರೊಡನೆ ಸಹಾಯಕ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

೨೦೧೨ರಲ್ಲಿ ತೆರೆಕಂಡಿರುವ "ರಾಂಬೊ" ಚಿತ್ರದ ಮೂಲಕ ಇವರು ಮೊದಲ ಬಾರಿಗೆ ನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ೨೦೧೩ ರಲ್ಲಿ ವಿಕ್ಟರಿ, ೨೦೧೪ರಲ್ಲಿ ಅದ್ಯಕ್ಷ, ಚಿತ್ರಗಳಲ್ಲಿ ಇವರು ನಾಯಕನ ಪಾತ್ರದಲ್ಲಿ ಮಿಂಚಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.

 

ಹೀಗೆ ಇವರು ಹಿನ್ನಲೆ ಗಾಯಕರಾಗಿ, ನಿರ್ಮಾಪಕರಾಗಿ, ಹಾಸ್ಯ ನಟರಾಗಿ ನಂತರ ನಾಯಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada