X
ಶರ್ಮಿತಾ ಗೌಡ

ಶರ್ಮಿತಾ ಗೌಡ ಜೀವನ ಚರಿತ್ರೆ

ಶರ್ಮಿತಾ ಗೌಡ ಕನ್ನಡ ಕಿರುತೆರೆ ನಟಿ. ಮೂಲತಃ ಚಿಕ್ಕಮಗಳೂರಿನವರಾದ ಇವರು, ಸೇಂಟ್ ಜೋಸೆಫ್ಸ್ ಬಾಲಕಿಯರ ಶಾಲೆಯಲ್ಲಿ ಶಾಲಾ ಶಿಕ್ಷಣ ಮುಗಿಸಿದರು. ಆನಂತರ ಮೌಂಟೇನ್ ವ್ಯೂ ಕಾಲೇಜಿನಲ್ಲಿ ಓದಿದ ಇವರು, ಬಿಎಸ್ಸಿ ಹಾಗೂ ಎಂಎಸ್ಸಿ ಎರಡರಲ್ಲೂ ಅಗ್ರಶ್ರೇಯಾಂಕ ಪಡೆದು ಗೋಲ್ಡ್ ಮೆಡಲ್ ತೆಗೆದುಕೊಂಡಿದ್ದಾರೆ. 

ಓದುತ್ತಿರುವಾಗಲೇ ಶರ್ಮಿತಾಗೆ ಮದುವೆಯಾಗಿ, ಮಗು ಜನಿಸಿತು. ಆನಂತರ ಫಿಟ್ನೆಸ್ ಸೆಂಟರ್‌ವೊಂದರಲ್ಲ ನ್ಯೂಟ್ರಿಶಿಯನಿಸ್ಟ್ ಆಗಿ ಕೆಲಸ ಆರಂಭಿಸಿದರು. ಶರ್ಮಿತಾ ಗೌಡ ಅಂದ-ಚೆಂದ, ಪ್ರತಿಭೆ ಬಗ್ಗೆ ತಿಳಿದಿದ್ದ ಸ್ನೇಹಿತರು ಸೌಂದರ್ಯ ಸ್ಫರ್ಧೆ ಹಾಗೂ ಅಭಿನಯ ಕ್ಷೇತ್ರಗಳಲ್ಲಿ ಭಾಗವಹಿಸುವಂತೆ ಒತ್ತಾಯ ಮಾಡಿದ್ದರು. ಅದರಂತೆ 2016ರಲ್ಲಿ ಮಿಸ್ ಚಿಕ್ಕಮಗಳೂರು ಆಗಿ ಹೊರಹೊಮ್ಮಿದ್ದರು. 2017ರಲ್ಲಿಮಿಸೆಸ್ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶರ್ಮಿತಾ,  ರನ್ನರ್‌ ಅಪ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.

ಕಿರುತೆರೆ
 
ಬಳಿಕ 'ಜಾನಕಿ ರಾಘವ' ಧಾರಾವಾಹಿ ಮೂಲಕ ಶರ್ಮಿತಾ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟರು. ಮೊದಲ ಧಾರಾವಾಹಿಯಲ್ಲೇ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡ ಇವರು  ನಂತರ ಮನೆಯೇ ಮಂತ್ರಾಲಯ, ನೀಲಾ, ಯಾರಿವಳು, ಗೀತಾ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದರು. ಈ ಪೈಕಿ ಗೀತಾ ಸೀರಿಯಲ್‌ನ ಭಾನುಮತಿ ಪಾತ್ರ ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಟ್ಟಿತು. ಈ ಧಾರಾವಾಹಿಯಲ್ಲಿನ ಅವರ ಡ್ರೆಸ್ಸಿಂಗ್ ಸೆನ್ಸ್ ಅನೇಕರಿಗೆ ಇಷ್ಟವಾಗಿತ್ತು. ವಿಲನ್ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿರುವ ಶರ್ಮಿತಾ, ಅತ್ಯುತ್ತಮ ಖಳನಾಯಕಿ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಸಿನಿಮಾ
 
ಶರ್ಮಿತಾ ಗೌಡ ಸಿನಿಮಾ ಮಾತ್ರವಲ್ಲದೇ, ಫ್ಯಾಮಿಲಿ ಪ್ಯಾಕ್, ಆಮ್ಲೆಟ್, ಸೀತಾಯಣ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+