ಶಿವಾಜಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಪೋಷಕ ನಟ. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಕಿರುತೆರೆ ಸೀರಿಯಲ್ ಎಪಿಸೋಡ್ ಗಳಲ್ಲಿ ನಟಿಸಿದ್ದಾರೆ.
ಮೈಸೂರಿನಲ್ಲಿ ಬೆಳೆದ ಇವರಿಗೆ ವಿದ್ಯೆ ಅಷ್ಟಕಷ್ಟೆ. ಪಿಯುಸಿವರೆಗೆ ಓದಿ ನಂತರ ಕುಟುಂಬದ ಬೇಕರಿಯಲ್ಲಿ ಸಹಾಯ ಮಾಡತೊಡಗಿದರು. ನಂತರ ಬಿಡುವಿನ ವೇಳೆಯಲ್ಲಿ ಕಲಾಕ್ಷೇತ್ರಕ್ಕೆ ಹೋಗುತ್ತಿದ್ದರು. ತಮ್ಮ ಫೇವರೇಟ್ ಮಾಸ್ಟರ್ ಹಿರಣ್ಣಯ್ಯನವರನ್ನು ಅನುಕರಣೆ ಮಾಡುತ್ತಾ ನಾಟಕದಲ್ಲಿ ಇನ್ನಷ್ಟೂ ಹೆಚ್ಚು ಅಭಿರುಚಿ ಬೆಳೆಸಿಕೊಂಡರು. ನಂತರ ಗೆಳೆಯರೊಂದಿಗೆ ಸೇರಿ ಸ್ನೇಹ ಕಲಾನಿಕೇತನ ಎಂಬ ತಂಡ ಕಟ್ಟಿಕೊಂಡು ನಾಟಕ ಆಡಲು ಆರಂಭಿಸಿದರು. ನಂತರ ಅಭಿನಯದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರ್ಣ ಪ್ರಮಾಣದ ಕೋರ್ಸ್ ಮಾಡಿದರು.
ನಂತರ ಹಂಸಲೇಖರ ಕರೆಯಂತೆ ಚಿತ್ರವೊಂದರಲ್ಲಿ ಅಭಿನಯಿಸಿ ಸಿನಿ ಜರ್ನಿ ಆರಂಭಿಸಿದರು. ಕಿರುತೆರೆಯಲ್ಲಿ ಇವರು ನಟಿಸಿದ ಮೊದಲ ಧಾರಾವಾಹಿ ``ಸಮಾಗಮ''. ನಂತರ ಸಂಕ್ರಾತಿ, ಪಾಪ ಪಾಂಡು, ಮಳೆಬಿಲ್ಲು ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದರು.