ಶೃತಿ ನಾಯುಡು ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಖ್ಯಾತ ನಿರ್ಮಾಪಕಿ,ನಿರ್ದೇಶಕಿ ಮತ್ತು ನಟಿ.ಹಲವು ಪ್ರಖ್ಯಾತ ಕಿರುತೆರೆ ಸೀರಿಯಲ್‌ಗಳನ್ನು ನಿರ್ದೇಶಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಬಾಲ್ಯ ಮತ್ತು ಶಿಕ್ಷಣ ಮುಗಿಸಿದ್ದೆಲ್ಲಾ ಮೈಸೂರಿನಲ್ಲಿ. ಇಂಜಿನಿಯರಿಂಗ್ ಪದವಿ ಅರ್ಧದಲ್ಲಿಯೇ ಬಿಟ್ಟು ತನ್ನ ಕನಸುಗಳ ಬೆನ್ನತ್ತಿ ಬಂದ ಇವರು ಒಂದು ದಶಕದಲ್ಲಿ ಕನ್ನಡ ಕಿರುತೆರೆಯ ಅವಿಭಾಜ್ಯ ಅಂಗವಾಗಿ ಬೆಳೆದರು.
ಕಿರುತೆರೆಯಲ್ಲಿನ `ಸವಿರುಚಿ' ಎಂಬ ಅಡುಗೆ ಕಾರ್ಯಕ್ರಮದಿಂದ ಇವರ ಪಯಣ ಆರಂಭವಾಯಿತು. ನಂತರ `ಪ್ರೀತಿ ಇಲ್ಲದ ಮೇಲೆ' ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಬೆಳಕಿಗೆ ಬಂದರು.
`ಮನೆಯೊಂದು ಮೂರು ಬಾಗಿಲು',`ಕಿಚ್ಚು',`ಮತ್ತೆ ಬರುವುನು ಚಂದಿರ',`ಕವಲುದಾರಿ',`ಶರಪಂಜರ' ಮುಂತಾದ ಟೆಲಿ ಸೀರಿಯಲ್‌ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ತಮ್ಮ ಅದ್ಭುತ ನಟನೆಗೆ ಪ್ರಶಂಸೆ ಪಡದರು.
`ಚಿ.ಸೌ.ಸಾವಿತ್ರಿ' ಧಾರಾವಾಹಿಯಿಂದ ನಿರ್ದೇಶಕಿಯಾಗಿ ಕೂಡ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದರು.`ನಮ್ಮಮ್ಮ ಶಾರದೆ' ಇವರು ನಿರ್ದೇಶಿಸಿದ ಮೊದಲ ಧಾರಾವಾಹಿ.
ಶೃತಿ ನಾಯ್ಡು ಚಿತ್ರ ಪ್ರೊಡಕ್ಷನ್ಸ್ ಮುಖಾಂತರ ಹಲವು ಸೀರಿಯಲ್ ನಿರ್ಮಿಸಿರುವ ಇವರು`ರಿಯಾಲಿಟಿ ಶೋ ಮತ್ತು ಧಾರಾವಾಹಿಗಳ' ಮಿಶ್ರಣವಿರುವ ನಿಗದಿತ ಎಪಿಸೋಡ್‌ಗಳ ಕಥಾ ಸರಣಿಯನ್ನು ಮೊದಲ ಬಾರಿಗೆ ಕನ್ನಡದಲ್ಲಿ ಪ್ರಯೋಗ ತಂದರು.
ಸಮಾಜಮುಖಿಯಾಗಿರುವ ಶೃತಿ `ಕೃಷಿ-ಖುಷಿ' ಕಾರ್ಯಕ್ರಮದ ಮೂಲಕ ಊರೂರುಗಳನ್ನು ಸುತ್ತಿ ಕೃಷಿ ಕೆಲಸಗಳಲ್ಲಿ ಸಾವಯವ ಕೃಷಿಯನ್ನು ಪ್ರೋತ್ರಾಹಿಸುತ್ತಿದ್ದಾರೆ.`ಉತ್ತಮ ನಟಿ',ಉತ್ತಮ ನಿರ್ದೇಶಕಿ ಮತ್ತು ಉತ್ತಮ ನಿರ್ಮಾಪಕಿ ವಿಬಾಗಗಳಲ್ಲಿ ಹಲವು ಬಾರಿ ಪ್ರಶಸ್ತಿ ಪಡೆದಿದ್ದಾರೆ.
ನವರಸ ನಾಯಕ ಜಗ್ಗೇಶ್ ನಟಿಸುತ್ತಿರುವ `ಪ್ರೀಮಿಯರ್ ಪದ್ಮಿನಿ' ಚಿತ್ರದ ಮೂಲಕ ಚಂದನವನಕ್ಕೆ ನಿರ್ಮಾಪಕಿಯಾಗಿ ಕಾಲಿಡುತ್ತಿದ್ದಾರೆ. ಚಿತ್ರಗಳಲ್ಲಿ ನಟಿಸಿರುವ ಇವರು `ಜೈ ಭಜರಂಗ ಬಲಿ' ಚಿತ್ರದಲ್ಲಿ ಅಜಯ ರಾವ್‌ರ ತಾಯಿ ಪಾತ್ರದಲ್ಲಿ ನಟಿಸಿ ಕನ್ನಡ ಚಿತ್ರರಂಗ ಪ್ರವೇಶಿಸಿದರು.
ಕನ್ನಡದ ಎಕ್ತಾ ಕಪೂರ್ ಎಂದೇ ಕರೆಯಿಸಿಕೊಳ್ಳುವ ಶೃತಿ ಒಂದು ಕಾಲದಲ್ಲಿ ತಮ್ಮ ಪೋಟೊ ಅಲ್ಬಮ್ ಹಿಡಿದು ಸಿನಿಸಂತೆಯಲ್ಲಿ ಅವಕಾಶ ಹಡುಕುತ್ತಿದ್ದರು.ಆದರೆ ಈಗ ಎಷ್ಟೋ ಜನ ಪ್ರತಿಭೆಗಳ ಸಿನಿ ಜೀವನಕ್ಕೆ ಬುನಾದಿ ಹಾಕಿದ್ದಾರೆ.
ನಿರ್ದೇಶನ ಮತ್ತು ನಿರ್ಮಾಣ ಮಾಡಿದ ಸೀರಿಯಲ್‌ಗಳು
ಚಿ.ಸೌ ಸಾವಿತ್ರಿ, ದೇವಿ, ಪುನರವಿವಾಹ, ರಾಜಕುಮಾರಿ, ಪುನರವಿವಾಹ -2, ಅತಿ ಮಧುರ ಅನುರಾಗ, ಶ್ರೀರಸ್ತು ಶುಭಮಸ್ತು, ಮಹಾದೇವಿ, ಮಹಾನದಿ, ಬ್ರಹ್ಮಗಂಟು, ಸಂಜು ಮತ್ತು ನಾನು
ನಟಿಸಿದ ಸೀರಿಯಲ್‌ಗಳು
ಪ್ರೀತಿ ಇಲ್ಲದ ಮೇಲೆ, ಮನೆಯೊಂದು ಮೂರು ಬಾಗಿಲು, ಕಿಚ್ಚು, ಮತ್ತೆ ಬರುವುನು ಚಂದಿರ, ಕವಲುದಾರಿ,ಶರಪಂಜರ