X
ಹೋಮ್ » ಸೆಲಬ್ರಿಟಿಗಳು » ಸಿರಿಜಾ » ಜೀವನ ಚರಿತ್ರೆ
ಸಿರಿಜಾ

ಸಿರಿಜಾ ಜೀವನ ಚರಿತ್ರೆ

ಸಿರಿಜಾ ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಇವರು, 9ನೇ ತರಗತಿಯಲ್ಲಿ ಓದುತ್ತಿರುವಾಗಲೇ 'ಅಂಬಿಕಾ' ಎಂಬ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಪಡೆದರು. 

ನಂತರ ನನ್ನವಳು ನನ್ನವಳು, ಮನೆಯೊಂದು ಮೂರು ಬಾಗಿಲು, ಬಂದೇ ಬರತಾವ ಕಾಲ, ರಂಗೋಲಿ, ಸಂಬಂಧ, ಕೋಗಿಲೆ, ಈ ಬಂಧನ, ಬದುಕು, ಕೋಗಿಲೆ, ಗೀತಾಂಜಲಿ ಜೋಡಿಹಕ್ಕಿ, ಅಂಜಲಿ ಸೇರಿದಂತೆ ಹಲವು ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ನಟನೆಗೆ ಕಾಲಿಟ್ಟ ಇವರು, ಕನ್ನಡ ಮಾತ್ರವಲ್ಲದೇ ಪರಭಾಷಾ ಕಿರುತೆರೆ ಹಾಗೂ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.  

ರಂಗೋಲಿ ಧಾರಾವಾಹಿಯಲ್ಲಿ ನಟಿ ಸಿರಿಜಾ 'ಅಭಿ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸೀರಿಯಲ್‌ಗೆ ಒಂದು ದೊಡ್ಡ ಅಭಿಮಾನಿ ಬಳಗವೇ ಇತ್ತು. ಆಗ ನಟಿ ಸಿರಿ ಪಿಯು ವ್ಯಾಸಂಗ ಮಾಡುತ್ತಿದ್ದರು. ಮನೆಯೊಂದು ಮೂರು ಬಾಗಿಲು ಸೀರಿಯಲ್‌ನಲ್ಲಿ 'ಅಶ್ವಿನಿ' ಎಂಬ ಪಾತ್ರ ನಿರ್ವಹಿಸಿದ್ದರು. ಈ ಧಾರಾವಾಹಿ ಅನೇಕ ವರ್ಷಗಳ ಕಾಲ ಪ್ರಸಾರವಾಗಿತ್ತು. ಇನ್ನು ಬದುಕು ಸೀರಿಯಲ್‌ಗೂ ಕೂಡ ಅಪಾರ ಅಭಿಮಾನಿ ಬಳಗವಿತ್ತು.  

ಸಿನಿಮಾಗಳು

2001ರಲ್ಲಿ ಜ್ಯೂನಿಯರ್ ಎನ್‌ಟಿಆರ್ ಜೊತೆ  'ನಿನ್ನು ಚೂಡಾಲನಿ' ಎಂಬ ತೆಲುಗು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ಸಿರಿಜಾ, ನಂತರ ಮತ್ತೆ ಮೂರು ತೆಲುಗು ಚಿತ್ರಗಳ ಅಭಿನಯಿಸಿದರು. ನಂತರ 2020ರಲ್ಲಿ ವಿಷ್ಣವರ್ಧನ್ ಅಭಿನಯದ ಸಿಂಹಾದ್ರಿಯ ಸಿಂಹ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಸಿರಿ, ನಂತರ ದಿಲ್, ಚಂದು, ನೀನಂದ್ರೆ ಇಷ್ಟ, ದೇವನಾಗ ಸಿನಿಮಾಗಳಲ್ಲಿ ಅಭಿನಯಿಸಿದ್ದರು.  ಚಂದು ಸಿನಿಮಾದ 'ಅವಳ ಒಲವ ನಗೆ' ಹಾಡಿನಲ್ಲಿ ಸುದೀಪ್ ಜೊತೆ ಹೆಜ್ಜೆ ಹಾಕಿದ್ದರು.  


ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಗಳ ೩೦ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ  ಇವರು, ಸಾಕಷ್ಟು ಹಿಟ್ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕೆಲ ವರ್ಷಗಳ ಹಿಂದೆ ಬಹುಬೇಡಿಕೆಯ ನಟಿಯಾಗಿದ್ದ ಸಿರಿಜಾ, ಏಕಕಾಲಕ್ಕೆ ನಾಲ್ಕು ಧಾರಾವಾಹಿಗಳಲ್ಲಿ ನಟಿಸಿದ್ದ ದಾಖಲೆಯಿದೆ. 


ಬಿಗ್‌ಬಾಸ್‌: ಸಿರಿ ಅವರು ಕಿಚ್ಚ ಸುದೀಪ್ ನಿರೂಪಣೆಯ ಬಿಗ್‌ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಭಾಗಹಿಸಿದ್ದರು. ಆದರೆ, 12ನೇ ವಾರ ಎಲಿಮಿನೇಟ್ ಆಗಿ ಹೊರಬಂದರು.



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+