ಸ್ನೇಹಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಖ್ಯಾತ ನಟಿ ತಮಿಳು,ತೆಲಗು,ಮಲಯಾಳಂ ಮತ್ತು ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ತಮಿಳುನಾಡು ಮೂಲದ ರಾಜಾರಾಮ್ ಮತ್ತು ಪದ್ಮಾವತಿ ದಂಪತಿಗಳಿಗೆ ಮುಂಬೈನಲ್ಲಿ ಜನಿಸಿದರು. ಇವರು ಬೆಳೆದಿದ್ದೆಲ್ಲಾ ದುಬೈನಲ್ಲಿ. ಮಲಯಾಳಂ ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ತಮಿಳಿನ `ಎನ್ನವಳೇ' ಚಿತ್ರದಿಂದ ಬ್ರೇಕ್ ಪಡೆದರು. ನಂತರ ತೆಲುಗು ಚಿತ್ರರಂಗ ಪ್ರವೇಶಿಸಿದರು.
ಕನ್ನಡದಲ್ಲಿ ರವಿಶಾಸ್ತ್ರೀ, ಒಗ್ಗರಣೆ ಮತ್ತು ಕುರುಕ್ಷೇತ್ರ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ನಟ ಪ್ರಸನ್ನ ಜೊತೆ ಮದುವೆಯಾಗಿರುವ ಸ್ನೇಹಾಗೆ ಒಂದು ಗಂಡು ಮಗು ಇದೆ.