ಸೋನು ಸೂದ್ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಚಿತ್ರನಟ. ಇವರು ಕೆಲ ಕನ್ನಡ,ತೆಲಗು,ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.
ಸೋನು ಪಂಜಾಬಿನ ಮೊಗಾದಲ್ಲಿ ಜನಿಸಿದರು, ಇವರ ತಂದೆ ಉದ್ಯಮಿಯಾಗಿದ್ದರೆ, ತಾಯಿ ಇಂಗ್ಲೀಷ್ ಮತ್ತು ಇತಿಹಾಸದ ಪ್ರೊಫೆಸರ್ ಆಗಿದ್ದರು. ಇವರಿಗೆ ಇಬ್ಬರು ಸಹೋದರಿಯರಿದ್ದಾರೆ.
ಪಂಜಾಬಿನಲ್ಲಿ ವಿಧ್ಯಾಭ್ಯಾಸ ಮಾಡಿದ ಇವರು ನಂತರ ನಾಗಪುರದಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಇವರು ತಮ್ಮ ಪದವಿಯ ಕೊನೆಯ ವರ್ಷ ಓದುತ್ತಿದ್ದಾಗ ಗ್ರಾಸಿಮ್ `ಮಿ.ಇಂಡಿಯಾ' ಸ್ಪರ್ಧೆಯಲ್ಲಿ ಭಾಗವಹಿಸಿ ಟಾಪ್ ಫೈವ್‌ನಲ್ಲಿ ಸ್ಥಾನ ಪಡೆದರು.
ಸಂಪೂರ್ಣ ಸಸ್ಯಾಹಾರಿಯಾಗಿರುವ ಇವರು ಸೋನಾಲಿ ಎಂಬುವವರನ್ನು ಮದುವೆಯಾಗಿದ್ದಾರೆ. ಇವರಿಗೆ ಇಷಾನ್ ಎಂಬ ಪುತ್ರನಿದ್ದಾನೆ.