X
ಶ್ರೀನಿಧಿ ಶೆಟ್ಟಿ
Actress

ಶ್ರೀನಿಧಿ ಶೆಟ್ಟಿ ಜೀವನ ಚರಿತ್ರೆ

ಶ್ರೀನಿಧಿ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ. ಇವರು 1992ರ ಅಕ್ಟೋಬರ್ 21ರಂದು ಮಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನ ಜೈನ ವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಇವರು, 2016ರಲ್ಲಿ ಜರುಗಿದ ಮಿಸ್ ದಿವಾ ಸ್ಪರ್ಧೆಯ ವಿಜೇತೆರಾಗಿದ್ದಾರೆ. ಕೆಲಕಾಲ ಬೆಂಗಳೂರಿನ ಖ್ಯಾತ ಸಾಫ್ಟವೇರ್ ಕಂಪನಿ `ಆಕ್ಸೆಂಚರ್'ನ ಉದ್ಯೋಗಿಯಾಗಿದ್ದರು.

 

ಈ ಸಮಯದಲ್ಲಿ ಹಲವಾರು ಡಿಸೈನರ್‌ಗಳ ಜೊತೆಗೆ ಮಾಡೆಲ್ ಆಗಿ ಕೆಲಸ ಮಾಡಿದರು. ಹಲವಾರು ಸೌಂದರ್ಯ ಸ್ಫರ್ಧೆಗಳಲ್ಲೂ ಭಾಗವಹಿಸಿರುವ ಇವರು, ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಸ್ಪರ್ಧೆಯ ವಿಜೇತೆ. ದುಬೈ, ಪ್ರಾನ್ಸ್ ,ಜಪಾನ್,ಸಿಂಗಾಪುರ್,ಥೈಲಾಂಡ್,ಪೊಲ್ಯಾಂಡ್ ದೇಶಗಳ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ.

 

ಸಿನಿಜೀವನ


2018ರಲ್ಲಿ ತೆರೆಕಂಡ ಕೆಜಿಎಫ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಈ ಸಿನಿಮಾ ಸೂಪರ್ ಹಿಟ್ ಆಗುವುದಲ್ಲದೇ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತಾಯಿತು. ನಂತರ 2022ರಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲೂ ನಟಿಸಿದರು. ಇದೇ ವರ್ಷ ತಮಿಳಿನ ನಟ ಚಿಯಾನ್ ವಿಕ್ರಮ್ ಜೊತೆ 'ಕೋಬ್ರಾ' ಸಿನಿಮಾದಲ್ಲಿ ನಟಿಸಿದರು. ಸದ್ಯ ಶ್ರೀನಿಧಿ ಶೆಟ್ಟಿ ತೆಲುಗಿನ ತೆಲುಸು ಕದಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

 

 

 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+