ಸುರ್ವಿನ್ ಚಾವ್ಲಾ ಇವರು ಜನಿಸಿದ್ದು ಜುಲೈ 16, 1984 ಚಂಡೀಗಡದಲ್ಲಿ. ನಟಿ ಸುರ್ವಿನ್ ಚಾವ್ಲಾ ಇವರು ಕನ್ನಡ, ತಮಿಳು ತೆಲುಗು, ಪಂಜಾಬಿ ಸೇರಿದಂತೆ ಬಾಲಿವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ಮಿಂಚಿದ್ದು, ಸುಮಾರು 20 ಸಿನಿಮಾಗಳಲ್ಲಿ ಹಾಗೂ 5 ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
ಹಿಂದಿ 'ಹೇಟ್ ಸ್ಟೋರಿ 2', ಅರ್ಜುನ್ ಸರ್ಜಾ ಅವರ ಜೊತೆ 'ಜೈ ಹಿಂದ್ 2' ಮುಂತಾದ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಕನ್ನಡದಲ್ಲಿ 'ಪರಮೇಶ ಪಾನ್ ವಾಲ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.