ತನಿಷಾ ಕುಪ್ಪಂಡ ಕನ್ನಡ ಚಿತ್ರರಂಗದ ನಟಿ. ಮೂಲತಃ ಕೊಡಗಿನವರಾದ ಇವರು, 1990 ಆಗಸ್ಟ್ 10ರಂದು ಜನಿಸಿದರು. ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದಿರುವ ಇವರು ಯಶಸ್ವಿ ಉದ್ಯಮಿ ಕೂಡ ಹೌದು. ಮೊದಲಿನಿಂದಲೂ ಬ್ಯುಸಿನೆಸ್ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ ಹೊಂದಿದ್ದ ತನಿಷಾ, ಬೆಂಗಳೂರಿನ ಆರ್‌ಆರ್ ನಗರದಲ್ಲಿ 'ಅಪ್ಪುಸ್ ಕಿಚನ್' ಎಂಬ ನಾನ್‌ವೆಜ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ.
ಧಾರಾವಾಹಿಗಳು
'ಮಂಗಳಗೌರಿ ಮದುವೆ' ಧಾರಾವಾಹಿ ಮೂಲಕ ನಟನೆಗೆ ಎಂಟ್ರಿಕೊಟ್ಟ ತನಿಷಾ, ನಂತರ ಇಂತಿ ನಿಮ್ಮ ಆಶಾ, ಮಂಗಳಗೌರಿ ಮದುವೆ, ಸತ್ಯ ಶಿವಂ ಸುಂದರಂ, ವಾರಸ್ದಾರ, ಸರಯೂ, ಸಾಕ್ಷಿ, ಪ್ರೀತಿ ಎಂದರೇನು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಹಲವು ಪರಭಾಷಾ ಸೀರಿಯಲ್‌ಗಳಲ್ಲೂ ಅಭಿನಯಿಸಿದ್ದಾರೆ.
ಸಿನಿಮಾ
ದಂಡುಪಾಳ್ಯ ಸಿನಿಮಾ ಮೂಲಕ ಬೆಳ್ಳಿತೆರೆ ಎಂಟ್ರಿಕೊಟ್ಟ ತನಿಷಾ, ನಂತರ ಬಾಡಿಗಾರ್ಡ್, ಉಂಡೆನಾಮ, ಪೆಂಟಗನ್ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ.
ವಿವಾದ: ಪೆಂಟಗನ್ ಸಿನಿಮಾದಲ್ಲಿ ತನಿಷಾ ಕುಪ್ಪಂಡ ಬೋಲ್ಡ್ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದ ಪ್ರಚಾರದ ವೇಳೆ ಯ್ಯೂಟೂಬರ್ ಒಬ್ಬರು ಅಶ್ಲೀಲ ಸಿನಿಮಾದಲ್ಲಿ ನಟಿಸುತ್ತೀರಾ ಅಂತ ಪ್ರಶ್ನೆ ಮಾಡಿದ್ದರು. ಈ ಸಂಬಂಧ ಅವರು ಧ್ವನಿ ಎತ್ತಿದ್ದರು. ಇದರ ಜೊತೆಗೆ ರಾಜಾಹುಲಿ ಸಿನಿಮಾದ ಹರ್ಷ ಕೂಡ ತಮಗೆ ಅಶ್ಲೀಲ ಮೆಸೇಜ್ ಮಾಡಿದ್ದರ ಬಗ್ಗೆ ಮಾತನಾಡಿದ್ದರು. ಇದರ ಜೊತೆಗೆ ದಂಡುಪಾಳ್ಯ ಚಿತ್ರದಲ್ಲಿ ತನಿಷಾ ಅವರು ಪೂಜಾ ಗಾಂಧಿಗೆ ಕಿಸ್ ಕೊಟ್ಟಿದ್ದರು. ಇದು ಕೂಡ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು.
ಬಿಗ್‌ಬಾಸ್: ತನಿಷಾ ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆದರೆ, 14ನೇ ವಾರ ಮನೆಯಿಂದ ಎಲಿಮಿನೇಟ್ ಆದರು.