twitter
    Celebs»Tanya Hope»Biography

    ತಾನ್ಯಾ ಹೋಪ್ ಜೀವನಚರಿತ್ರೆ

    ತಾನ್ಯಾ ಹೋಪ್ ಕನ್ನಡ.ತೆಲಗು ,ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. 2016 ರಿಂದ ತೆಲಗು ಚಿತ್ರಗಳ ಮೂಲಕ ಸಿನಿಪಯಣ ಆರಂಭಿಸಿದ ಇವರು ಚಾಲೆಂಜಿಂಗ್ ಸ್ಟಾರ್ ದರ್ಶನ್‌ರವರ `ಯಜಮಾನ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿಸುತ್ತಿದ್ದಾರೆ.

    ಬೆಂಗಳೂರಿನ ಉದ್ಯಮಿಯೊಬ್ಬರ ಪುತ್ರಿಯಾಗಿ ಜನಿಸಿದ ತಾನ್ಯಾ ಬೆಂಗಳೂರಿನ ಸ್ಯಾಕ್ರೆಡ್ ಹಾರ್ಟ್ ಸ್ಕೂಲ್‌ನಲ್ಲಿ ವಿಧ್ಯಾಭ್ಯಾಸ ಮುಗಿಸಿದರು. ನಂತರ ಪದವಿಗಾಗಿ ಲಂಡನ್‌ನ `ವೆಸ್ಟ್‌ಮಿಂಸ್ಟರ್' ಯುನಿವರ್ಸಿಟಿ ಸೇರಿದರು. ಇಲ್ಲಿ `ಅಂತರಾಷ್ಟ್ರೀಯ ಸಂಬಂಧ'ಗಳ ವಿಷಯಗಳ ಮೇಲೆ ಪದವಿ ಮುಗಿಸಿದ್ದಾರೆ.

    ಆನಂತರ ಭಾರತಕ್ಕೆ ಹಿಂದುರಿಗಿದ ಇವರು ಪುಣೆಯ `ಟೈರಾ ಟ್ರೇನಿಂಗ್ ಸ್ಟುಡಿಯೋಸ್‌ನಲ್ಲಿ ಮಾಡೆಲಿಂಗ್ ತರಬೇತಿ ಪಡೆದರು. 2015 ರಲ್ಲಿ ಕೊಲ್ಕತ್ತಾದಲ್ಲಿ ಜರುಗಿದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದದ್ದು ವಿಶೇಷ. 2016 ರಲ್ಲಿ ತೆಲಗು ಚಿತ್ರ `ನೇನು ಶೈಲಜಾ'ದಲ್ಲಿ ಅತಿಥಿ ಪಾತ್ರದ ಮೂಲಕ ಸಿನಿಪಯಣ ಆರಂಭಿಸಿದ ಇವರು ನಂತರ ಮೂರು ತೆಲಗು ಮತ್ತು ಒಂದು ತಮಿಳು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು.

    ಪ್ರಸ್ತುತ ಕನ್ನಡದಲ್ಲಿ ಉಪೇಂದ್ರರ `ಹೋಮ್ ಮಿನಿಸ್ಟರ್',ದರ್ಶನ್‌ರ `ಯಜಮಾನ', ಅಭಿಷೇಕ್ ಅಂಬರೀಶ್‌ರ `ಅಮರ್' ಮತ್ತು ಸುನೀಲ್ ಕುಮಾರ ದೇಸಾಯಿವರ `ಉದ್ಘರ್ಷ' ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X