Celebs » Tara » Biography
ಜೀವನಚರಿತ್ರೆ

ತಾರಾ (ಅನುರಾಧ) ಕನ್ನಡ, ತೆಲುಗು, ಮಲಯಾಳಂ ಸಿನಿಮಾ ನಟಿಯಾಗಿದ್ದಾರೆ. ಇವರು ಜನಿಸಿದ್ದು 1965 ಬೆಂಗಳೂರಿನಲ್ಲಿ. ತಾರಾ ಕನ್ನಡದ ಒಬ್ಬ ಪ್ರತಿಭಾವಂತ ನಟಿ. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ.

ಕಾನೂರು ಹೆಗ್ಗಡತಿ, ಮುನ್ನುಡಿ, ಕಾರ್ಮುಗಿಲು, ಮುಂಜಾನೆಯ ಮಂಜು, ಕರಿಮಲೆಯ ಕಗ್ಗತ್ತಲು, ಮತದಾನ, ನಿನಗಾಗಿ, ಹಸೀನಾ . ಸೈನೈಡ್ ಚಿತ್ರಗಳು ಇವರಿಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳು. ಹಸೀನಾ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ.

2012ರಲ್ಲಿ ಕರ್ನಾಟಕ ಭಾರತೀಯ ಜನತಾ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗು ಇವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಸಟಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು ಸೈ ಎನಿಸಿಕೊಂಡಿದ್ದಾರೆ.

ತಾರಾಗೆ ಬಂದ ಪ್ರಶಸ್ತಿಗಳು
ಅತ್ಯುತ್ತಮ ನಟಿ - ರಾಷ್ಟ್ರಪ್ರಶಸ್ತಿ. ಚಿತ್ರ: ಹಸೀನಾ
ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ: ಕರಿಮಲೆಯ ಕಗ್ಗತ್ತಲು
ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ: ಕಾನೂರು ಹೆಗ್ಗಡತಿ
ಅತ್ಯುತ್ತಮ ಪೋಷಕ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಮುಂಜಾನೆಯ ಮಂಜು
ಅತ್ಯುತ್ತಮ ಹಾಸ್ಯ ನಟಿ - ಚಿತ್ರ: ನಿನಗಾಗಿ

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada