twitter

    ಉಮಾಪತಿ ಶ್ರೀನಿವಾಸ್ ಜೀವನಚರಿತ್ರೆ


    ಉಮಾಪತಿ ಶ್ರೀನಿವಾಸ್ ಗೌಡ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ. ಇವರು 1986ರ ಜುಲೈ 7ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ಜನಿಸಿದರು. ಬಿಕಾಂ ಪದವೀಧರರಾಗಿರುವ ಉಮಾಪತಿ, ಆದಿಚುಂಚನಗಿರಿ ಶಾಲೆಯಲ್ಲಿ ಆರಂಭಿಕ ಹಾಗೂ ಬೆಂಗಳೂರಿನಲ್ಲಿ ಗೇರ್ ಇನ್ನೋವೇಟಿವ್‌ನಲ್ಲಿ ಬಿಕಾಂ ಪದವಿ ಪೂರ್ಣಗೊಳಿಸಿದರು. 

    ಹಿನ್ನೆಲೆ
    ಉಮಾಪತಿ ಶ್ರೀನಿವಾಸ್ ಗೌಡ ಸದ್ಯ ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ನಿವಾಸಿ. ಸದ್ಯ ಅವರು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸಿಸುತ್ತಿದ್ದಾರೆ. ಉಮಾಪತಿ ಅವರದ್ದು ಮೊದಲಿನಿಂದಲೂ ಶ್ರೀಮಂತ ಕುಟುಂಬ. ಅವರ ತಂದೆ ಶ್ರೀನಿವಾಸ್ ಹಾಗೂ ತಾತ ಎಲ್ಲರೂ ಪ್ರಭಾವಿ ವ್ಯಕ್ತಿಗಳಾಗಿದ್ದವರೇ. ಆಗಿನ ಸಮಯಕ್ಕೆ ಉಮಾಪತಿ ತಂದೆ ಉತ್ತಮ ಆಸ್ತಿ ಮಾಡಿದ್ದರು. ಉಮಾಪತಿ ಶ್ರೀನಿವಾಸ್ ಅವರ ಹೆಸರಿನಲ್ಲಿ ಎಕರೆಗಟ್ಟಲೇ ಜಮೀನಿದೆ. ಒಂದೊಂದು ಜಮೀನಯ 70-80 ಎಕರೆಯಿದೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ 30/40 ಸೈಟ್‌ಗಳಿವೆ. 

    ಸ್ಯಾಂಡಲ್‌ವುಡ್ ಪ್ರವೇಶ
    ಕಿಚ್ಚ ಸುದೀಪ್ ನಟನೆಯ 'ಹೆಬ್ಬುಲಿ' ಸಿನಿಮಾ ನಿರ್ಮಾಣ ಮಾಡುವುದರ ಮೂಲಕ ಉಮಾಪತಿ ಶ್ರೀನಿವಾಸ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ನಿರ್ಮಾಪಕ ರಘುನಾಥ್ ಜೊತೆ ಸೇರಿ ಉಮಾಪತಿ ಹೆಬ್ಬುಲಿ ಜಂಟಿ ನಿರ್ಮಾಣ ಮಾಡಿದರು. ಆಗಿನ್ನು ಉಮಾಪತಿಗೆ 28 ವರ್ಷ ವಯಸ್ಸು. ಮೂಲತಃ ಬಿಸಿನೆಸ್‌ಮ್ಯಾನ್ ಆಗಿದ್ದ ಉಮಾಪತಿಗೆ ಚೊಚ್ಚಲ ಸಿನಿಮಾ ಒಳ್ಳೆಯ ಗಳಿಕೆ ತಂದು ಕೊಟ್ಟಿತ್ತು.  ನಂತರ ಬಹಳ ದೊಡ್ಡ ಬಜೆಟ್‌ನಲ್ಲಿ ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ನಿರ್ಮಿಸಿದರು. ಮುಂದೆ ಮದಗಜ ಸಿನಿಮಾವನ್ನು ನಿರ್ಮಿಸಿದರು. 

    ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ 
    'ಒಂದಲ್ಲಾ ಎರಡಲ್ಲಾ' ಎಂಬ ಮಕ್ಕಳ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಏಕತೆ ಸಿನಿಮಾ ಎಂಬ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಮಕ್ಕಳ ಚಿತ್ರ ಎಂಬ ಪ್ರಶಸ್ತಿಯೂ ಸಿಕ್ಕಿದೆ. ಇನ್ನು 2018ರಲ್ಲಿ ಅತ್ಯುತ್ತಮ ಮೂರನೇ ಸಿನಿಮಾ ಕರ್ನಾಟಕ ರಾಜ್ಯ ಪ್ರಶಸ್ತಿಯೂ ಈ ಚಿತ್ರಕ್ಕೆ ದೊರತಿದೆ.



     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X