twitter

    ವೈಜನಾಥ್ ಬಿರಾದಾರ್ ಜೀವನಚರಿತ್ರೆ

     ವೈಜನಾಥ್ ಬಿರಾದಾರ ಕನ್ನಡ ಚಿತ್ರಲೋಕ ಕಂಡ ಅದ್ಭುತ ಪ್ರತಿಭೆ. ಬೀದರ್ ಜಿಲ್ಲೆಯ ಭಾಲ್ಕಿ ಹತ್ತಿರವಿರುವ ತೇಗಂಪುರ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಇವರು ಕನ್ನಡದ ಖ್ಯಾತ ಪೋಷಕ ನಟ. ಚಿಕ್ಕವಯಸ್ಸಿನಲ್ಲಿಯೇ ತಂದೆ ತೀರಿಕೊಂಡಾಗ ಮನೆಯ ಭಾರ ಹೊರಲು ಶಾಲೆ ಬಿಟ್ಟರು. ಬಾಲ್ಯದಿಂದಲೇ ಭಜನೆ,ನಾಟಕ ,ಕೋಲಾಟಗಳಲ್ಲಿ ಆಸಕ್ತಿಯಿದ್ದ ವೈಜನಾಥ್ ಮುಂದೆ ನಾಟಕ ರಂಗಕ್ಕೆ ಬಂದರು. `ಬರ' ಚಿತ್ರದ ಚಿತ್ರೀಕರಣಕ್ಕಾಗಿ ಕನ್ನಡದ ಮೇರುನಟ ಅನಂತನಾಗ್ ಬೀದರ್ ಹತ್ತಿರ ಬೀಡುಬಿಟ್ಟಿದ್ದಾಗ ,ಅವರನ್ನು ಪರಿಚಯಿಸಿಕೊಂಡರು.

     

    ಬರಿ ಹೊಟ್ಟೆಯಲ್ಲಿ ಬಸ್ ಹಿಡಿದು ಕಲಾವಿದನಾಗಲು ಬೆಂಗಳೂರಿಗೆ ಬಂದ ಬಿರಾದಾರ ಸಾಕಷ್ಟು ಕಷ್ಟಪಟ್ಟರು. ಕಾಶಿನಾಥ್ ಅವರ `ಅಜಗಜಾಂತರ' ಚಿತ್ರದ ಮೂಲಕ ಚಿತ್ರರಂಗದ ಸಿನಿಪಯಣ ಆರಂಭಿಸಿದ ಬಿರಾದಾರಗೆ ಮುಂದೆ  `ತರ್ಲೆನನ್ಮಗ' ಚಿತ್ರದ ಭಿಕ್ಷುಕನ ಪಾತ್ರ ಕೈ ಹಿಡಿಯತು.

     

    2010 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ `ಕನಸೆಂಬೋ ಕುದರೆಯನೇರಿ' ಚಿತ್ರಕ್ಕೆ ಸ್ಪೇನ್ ದೇಶದಲ್ಲಿ ಅತ್ತ್ಯುತ್ತಮ ನಟ ಪ್ರಶಸ್ತಿ ಪಡೆದ ಇವರು 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X