X
ವಾರಿಜಶ್ರೀ ವೇಣುಗೋಪಾಲ್
Singer

ವಾರಿಜಶ್ರೀ ವೇಣುಗೋಪಾಲ್ ಜೀವನ ಚರಿತ್ರೆ

ವಾರಿಜಶ್ರೀ ವೇಣುಗೋಪಾಲ್ ಕನ್ನಡದ ಪ್ರತಿಭಾನ್ವಿತ ಗಾಯಕಿ ಮತ್ತು ಕೊಳಲು ವಾದಕಿ. ತಂದೆ ಹೆಚ್.ಎಸ್.ವೇಣುಗೋಪಾಲ್ ಮತ್ತು ತಾಯಿ ಟಿ.ವಿ.ರಮಾ ಇಬ್ಬರು ಸಂಗೀತ ಸಾಧಕರು. 1991 ಮಾರ್ಚ್ 6 ರಂದು ಬೆಂಗಳೂರಿನಲ್ಲಿ ಜನಿಸಿದರು. ಕೇವಲ ನಾಲ್ಕು ವರ್ಷದವರಿದ್ದಾಗಲೆ ಸುಮಾರು ಇನ್ನೂರು ವಿವಿಧ ರಾಗಗಳನ್ನು ಗುರುತಿಸುವ ಶಕ್ತಿ ಹೊಂದಿದ್ದರು. ತಂದೆಯೇ ಆರಂಭಿಕ ಸಂಗೀತ ಗುರು. ನಾಲ್ಕು ವರ್ಷದವರಿದ್ದಾಗಿನಿಂದ ವಿದುಷಿ ಹೆಚ್ ಗೀತಾರವರಿಂದ ಕರ್ನಾಟಕ ಸಂಗೀತ ವಿಧ್ಯಾಭ್ಯಾಸ ಆರಂಭಿಸಿದರು. ನಂತರ ವಿದುಷಿ ವಸಂತಾ ಶ್ರೀನಿವಾಸನ್, ವಿದ್ವಾನ್ ಡಿ.ಎಸ್.ಶ್ರೀವತ್ಸ, ವಿದ್ವಾನ್ ಸಲೀಮ್ ಪಿ ಸುಂದರೇಶನ್ ಮುಂತಾದ ಸಂಗೀತ ಸಾಧಕರಿಂದ ಹೆಚ್ಚಿನ ತರಬೇತಿ ಪಡೆದರು.

ಏಳು ವರ್ಷದವಿರಿದ್ದಾಗ ಬೆಂಗಳೂರು ಗಾಯನ ಸಮಾಜದಲ್ಲಿ ತಮ್ಮ ಮೊದಲ ಸಾರ್ವಜನಿಕ ಸಂಗೀತ ಕಛೇರಿ ನೀಡಿದರು. ಚಕ್ರಪೋನಿಕ್ಸ್ ಎಂಬ ಹೆಸರಿನ ತಂಡದ ಭಾಗವಾಗಿರುವ ವಾರಿಜಶ್ರೀ ಹಲವು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಶತಾವಧಾನಿ ಗಣೇಶ್ ರ `ಅಷ್ಟಾವಧಾನ' ಎಂಬ ಡಾಕುಮೆಂಟರಿ, ಚಿಗುರು, ಲಿಟಲ್ ಟ್ರೇಸರ್ಸ್ ಎಂಬು ಕಿರು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕೆಲವು ಇಟಾಲಿಯನ್ ಅಲ್ಬಮ್ ಗಳಲ್ಲಿ ಹಾಡಿದ್ದಾರೆ.

ಪ್ರಮುಖ ಅಲ್ಬಮ್ ಗಳು

ಅರ್ಪಣಾ
ಉಪಸನಾ
ಮೇಳ ರಾಗ ಮಾಲಿಕಾ
ಬಿದಿರು
ಕಾಯೋ ಎನ್ನ ಗೋಪಾಲ

ಪ್ರಶಸ್ತಿ-ಪುರಸ್ಕಾರಗಳು


ಕೆಂಪೇಗೌಡ ರಾಜ್ಯ ಪ್ರಶಸ್ತಿ - 1999
ವಿದ್ಯಾರತ್ನ ರಾಷ್ಟ್ರ ಪ್ರಶಸ್ತಿ - 1999
ಪರ್ಲ್ ಆಫ್ ಬೆಂಗಳೂರು -  2000
ಗಾನವಿನೋದಿನಿ (ಶಾರದಾ ಆಶ್ರಮ, ಕೊಲಂಬೋ) - 2000
ಅನನ್ಯ ನಾದಜ್ಯೋತಿ ಪುರಸ್ಕಾರ -2010
ಅನನ್ಯ ಪ್ರತಿಭೆ - 2010
ಕಿಮಾ (KiMA) ಬೆಸ್ಟ್ ವೋಕಲಿಸ್ಟ್ -2013
ಅತ್ಯುತ್ತಮ ಗಾಯಕಿ - ಸುವರ್ಣ ಕಾಮಿಡಿ ಅವಾರ್ಡ - ` ಡಾರ್ಲಿಂಗ್ ಡಾರ್ಲಿಂಗ್ ಗೀತೆ - ಮದರಂಗಿ ಚಿತ್ರ - 2014
ಮಿರ್ಚಿ ಮ್ಯೂಸಿಕ್ ಬೆಸ್ಟ್ ವೋಕಲಿಸ್ಟ್ - ಏನಲಾ ಬಡ್ಡೆದೆ - ರೋಸ್ ಚಿತ್ರ -2015
ಕಿಮಾ (KiMA) ಬೆಸ್ಟ್ ವೋಕಲಿಸ್ಟ್ - ಕುಲವಧು ಧಾರಾವಾಹಿ - 2014
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+