ವಸುಂಧರಾ ದಾಸ್ ಕನ್ನಡ,ತೆಲುಗು ,ಹಿಂದಿ ಮತ್ತು ತಮಿಳು ಚಿತ್ರರಂಗದ ನಟಿ ಮತ್ತು ಹಿನ್ನಲೆ ಗಾಯಕಿ. ಹೆಬ್ಬಾರ್ ಅಯ್ಯಂಗಾರ ಕುಟುಂಬದಲ್ಲಿ ಜನಿಸಿದ ಇವರು ಮೌಂಟ ಕಾರ್ಮೆಲ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ಗಣಿತದಲ್ಲಿ ಪದವಿ ಪಡೆದಿದ್ದಾರೆ. ಚಿಕ್ಕವರಿದ್ದಾಗಿನಿಂದಲೇ ಹಿಂದೂಸ್ತಾನಿ ಸಂಗೀತದಲ್ಲಿ ತರಬೇತಿ ಪಡೆದ ಇವರು `ಕನ್ನಡ,ಹಿಂದಿ,ಹೆಬ್ಬಾರ,ತಮಿಳು,ಇಂಗ್ಲಿಷ್ ಮತ್ತು ಸ್ಪಾನಿಷ್' ಭಾಷಯಲ್ಲಿ ಮಾತನಾಡಬಲ್ಲರು.
ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿರುವ ಇವರು ಗಾಯಕಿಯಾಗಿ ತುಂಬಾ ಪ್ರಸಿದ್ದಿಯಾಗಿದ್ದಾರೆ. ಇವರು ಇಟಾಲಿಯನ್ ದೇಶದ ರಾಬರ್ಟೋ ನರೇನ್ ಜೊತೆ ಸಪ್ತಪದಿ ತುಳಿದಿದ್ದಾರೆ.