ವಿಜಯ್ ಅಂತೋನಿ
Born on chennai
ವಿಜಯ್ ಅಂತೋನಿ ಜೀವನಚರಿತ್ರೆ
ಚೆನ್ನೈನಲ್ಲಿ ಜನಿಸಿದ ವಿಜಯ್ ಅಂಥೋನಿ ತಮಿಳು ಚಿತ್ರರಂಗದ ಪ್ರಮುಖ ನಟ, ಗಾಯಕ ಮತ್ತು ಸಂಗೀತ ನಿರ್ದೇಶಕ. ಸೌಂಡ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರುವ ವಿಜಯ್ 'ಆಡಿಯೋ ಫೈಲ್ಸ್' ಎಂಬ ಸಂಸ್ಥೆ ಸ್ಥಾಪಿಸಿ ಕಿರುತೆರೆ ಧಾರಾವಾಹಿಗಳು ಮತ್ತು ಸಾಕ್ಷ್ಯಚಿತ್ರಗಳಿಗೆ ಹಿನ್ನಲೆ ಸಂಗೀತ ನೀಡಲಾರಂಭಿಸಿದರು.
ತಮಿಳಿನ 'ದಿಷ್ಯೂಂ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದ ವಿಜಯ್ ಮುಂದೆ ಪರಭಾಷಾ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ. ಉಪೇಂದ್ರ ಅಭಿನಯದ 'ಬುದ್ಧಿವಂತ' ಚಿತ್ರದ ಮೂಲಕ ಕನ್ನಡಕ್ಕೆ ಪ್ರವೇಶಿಸಿದ ಇವರು ಮುಂದೆ 'ಅಸ್ಥಿತ್ವ' ಚಿತ್ರಕ್ಕೂ ಸಂಗೀತ ಸಂಯೋಜಿಸಿದರು.