X
ಹೋಮ್ » ಸೆಲಬ್ರಿಟಿಗಳು » ಯೋಗೇಶ್ » ಜೀವನ ಚರಿತ್ರೆ
ಯೋಗೇಶ್
Actor/Director/Lyricst

ಯೋಗೇಶ್ ಜೀವನ ಚರಿತ್ರೆ

ಲೂಸ ಮಾದ ಯೋಗೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಾಯಕ ನಟ ಮತ್ತು ಹವ್ಯಾಸಿ ಗಾಯಕ.`ದುನಿಯಾ' ಚಿತ್ರದ ಲೂಸ ಮಾದನ ಪಾತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದ ಯೋಗಿ ಜನಿಸಿದ್ದು 1990 ಜುಲೈ 06ರಂದು. ನಿರ್ಮಾಪಕ ಟಿ.ಪಿ.ಸಿದ್ಧರಾಜು ಮತ್ತು ಅಂಬುಜಾ ದಂಪತಿಗಳ ಪುತ್ರನಾಗಿರುವ ಇವರು ನಟ ದುನಿಯಾ ವಿಜಯ್ ಸೋದರ ಸಂಬಂಧಿ ಕೂಡ.
ದುನಿಯಾ ಚಿತ್ರದ ನಂತರ `ನಂದ ಲವ್ಸ ನಂದಿತಾ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಚಂದನವನ ಪ್ರವೇಶಿಸಿದರು.ನಂತರ `ರಾವಣ',`ಪುಂಡ',`ಯೋಗಿ' ಮುಂತಾದ ಚಿತ್ರಗಳಲ್ಲಿ ನಟಿಸಿದರು.2010 ರಲ್ಲಿ ತೆರೆಗೆ ಬಂದ ಎ.ಪಿ.ಅರ್ಜುನ್ ನಿರ್ದೇಶನದ `ಅಂಬಾರಿ' ಚಿತ್ರ ಭರ್ಜರಿ ಪ್ರದರ್ಶನ ಕಂಡು ಯೋಗಿಗೆ ಅತ್ತ್ಯುತ್ತಮ ನಾಯಕನಟ ರಾಜ್ಯಪ್ರಶಸ್ತಿ ತಂದು ಕೊಟ್ಟಿತು. ನಂತರ ಪುನೀತ್ ರಾಜಕುಮಾರ್ ಜೊತೆ ನಟಿಸಿದ `ಹುಡುಗರು' ಮತ್ತು `ಯಾರೇ ಕೂಗಾಡಲಿ' ಚಿತ್ರಗಳು ಕೂಡ ಯಶಸ್ವಿಯಾದವು.2012 ರಲ್ಲಿ ತೆರೆಕಂಡ ರಮ್ಯ ಜೊತೆ ಅಭಿನಯದ `ಸಿದ್ಲಿಂಗು' ಚಿತ್ರ ವಿಮರ್ಶಕ ಮತ್ತು ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆಯಿತು.
ಹೀಗೆ ಹಲವು ಚಿತ್ರಗಳಲ್ಲಿ ನಟಿಸಿರುವ ಯೋಗೇಶ್ ಕಿರುತೆರೆ ಟಿವಿ ಶೋಗಳಲ್ಲಿ ಜಡ್ಜ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ.2017 ರಲ್ಲಿ ಬಾಲ್ಯದ ಗೆಳತಿ ಸಾಹಿತ್ಯ ಜೊತೆ ಸಪ್ತಪದಿ ತುಳಿದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+