For Quick Alerts
  ALLOW NOTIFICATIONS  
  For Daily Alerts

  2020; ಕನ್ನಡ ಕಿರುತೆರೆಯಲ್ಲಿ ಬುಸುಗುಟ್ಟಿದ ಡಬ್ಬಿಂಗ್ ಧಾರಾವಾಹಿಗಳು

  By ಫಿಲ್ಮ್ ಡೆಸ್ಕ್
  |

  ಚಿತ್ರರಂಗ ಮತ್ತು ಧಾರಾವಾಹಿ ರಂಗ ಡಬ್ಬಿಂಗ್ ವಿರುದ್ಧದ ಹೋರಾಟ ಮಾಡುತ್ತಿರುವುದು ಇಂದಿನದ್ದಲ್ಲ. ಡಬ್ಬಿಂಗ್ ಚಿತ್ರಗಳಿಗೆ ಅವಕಾಶ ನೀಡಬಾರದು ಎಂಬ ಕೂಗು ತೀವ್ರವಾಗಿದ್ದ ಕಾಲದಲ್ಲಿ ಡಬ್ಬಿಂಗ್ ಪರ ಹೋರಾಟವೂ ಹುಟ್ಟಿದವು. ಕಾನೂನಿನ ಹೋರಾಟದಲ್ಲಿ ಡಬ್ಬಿಂಗ್ ಪರವಾದಿಗಳು ಜಯಿಸಿದರು. ಡಬ್ಬಿಂಗ್ ಮಾಡಬಹುದಾದ ಗುಣಮಟ್ಟದ ಚಿತ್ರಗಳು ಮತ್ತು ಕಾರ್ಯಕ್ರಮಗಳನ್ನು ಕನ್ನಡಕ್ಕೆ ತರುವುದು ಅವರ ಉದ್ದೇಶವಾಗಿತ್ತು. ಅದು ಈ ವರ್ಷ ಸಂಪೂರ್ಣವಾಗಿ ಈಡೇರಿದೆ ಎಂದರೆ ತಪ್ಪಾಗಲ್ಲ.

  ಈ ವರ್ಷ ಕೊರೊನಾ ಲಾಕ್ ಡೌನ್ ನಿಂದ ಸಿನಿಮಾರಂಗದ ಸಂಪೂರ್ಣ ಚಟುವಟಿಕೆ ಸಹ ಬಂದ್ ಆಗಿತ್ತು. ಪ್ರತೀದಿನ ಜನರಿಗೆ ಮನರಂಜನೆ ನೀಡುತ್ತಿದ್ದ ಮನರಂಜನಮಾಧ್ಯಮ ಮೊದಲ ಬಾರಿಗೆ ತನ್ನ ಕೆಲಸವನ್ನು ನಿಲ್ಲಿಸಿ ಸ್ಥಬ್ದವಾಗಿತ್ತು. ಈ ಸಮಯದಲ್ಲಿ ಜನರಿಗೆ ಮನರಂಜನೆ ನೀಡಲು ಆಯ್ದು ದಾರಿ ಡಬ್ಬಿಂಗ್. ಲಾಕ್ ಡೌನ್ ಅವಧಿ ಆರಂಭವಾಗಿ ಮುಗಿಯುವುದರೊಳಗೆ ಕಿರುತೆರೆಯಲ್ಲಿ ಸಾಕಷ್ಟು ಬದಲಾವಣೆಗಳಾಯಿತು. ಈ ಬದಲಾವಣೆಗಳಿಗೆ ಒಗ್ಗಿಕೊಳ್ಳುವುದು ಅನಿವಾರ್ಯವು ಆಗಿತ್ತು.

  'ಡಬ್ಬಿಂಗ್ ತಂದವರು, ನೀವು ಅಪ್ಪನಿಗೆ ಹುಟ್ಟಿದವರಾ? ಕನ್ನಡ ದ್ರೋಹಿಗಳು': ಜಗ್ಗೇಶ್ ಹೇಳಿಕೆಗೆ ಭಾರಿ ಖಂಡನೆ'ಡಬ್ಬಿಂಗ್ ತಂದವರು, ನೀವು ಅಪ್ಪನಿಗೆ ಹುಟ್ಟಿದವರಾ? ಕನ್ನಡ ದ್ರೋಹಿಗಳು': ಜಗ್ಗೇಶ್ ಹೇಳಿಕೆಗೆ ಭಾರಿ ಖಂಡನೆ

  ಕಿರುತೆರೆಯಲ್ಲಿ ಹೆಚ್ಚಿದ ಡಬ್ಬಿಂಗ್ ಸಿನಿಮಾಗಳು

  ಕಿರುತೆರೆಯಲ್ಲಿ ಹೆಚ್ಚಿದ ಡಬ್ಬಿಂಗ್ ಸಿನಿಮಾಗಳು

  ಅಪರೂಪಕ್ಕೆ ಡಬ್ಬಿಂಗ್ ಸಿನಿಮಾಗಳು ಚಿತ್ರಮಂದಿರದ ಅಂಗಳಕ್ಕೆ ಕಾಲಿಟ್ಟರೆ ಸಾಕು ಡಬ್ಬಿಂಗ್ ವಿರೋಧಿ ಹೋರಾಟಗಾರರು ಗುಡುಗುತ್ತಿದ್ದರು. ಭಾರಿ ವಿರೋಧ ವ್ಯಕ್ತವಾಗುತ್ತಿತ್ತು. ಇದರ ಬೆನ್ನಲ್ಲೇ ಸಿನಿಮಾಗಳು ನಿಧಾನವಾಗಿ ಚಿತ್ರಮಂದಿರಗಳಿಂದ ಕಿರುತೆರೆಗೆ ಎಂಟ್ರಿ ಕೊಟ್ಟಿತು. ಕಿರುತೆರೆಯಲ್ಲಿ ಡಬ್ಬಿಂಗ್ ಸಿನಿಮಾಗಳಿಂದ ಉತ್ತಮ ಕಮಾಯಿ ಆಗುತ್ತೆ ಎಂದು ಗೊತ್ತಾಗುತ್ತಿದ್ದಂತೆ, ತಮಿಳು ಮತ್ತು ತೆಲುಗಿನ ಸಾಲು ಸಾಲು ಸಿನಿಮಾಗಳು ಡಬ್ ಆಗಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಪ್ರೇಕ್ಷಕರ ಸಹ ಡಬ್ಬಿಂಗ್ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ.

  ಡಬ್ಬಿಂಗ್ ಧಾರಾವಾಹಿ ಪರ್ವ

  ಡಬ್ಬಿಂಗ್ ಧಾರಾವಾಹಿ ಪರ್ವ

  ಡಬ್ಬಿಂಗ್ ಸಿನಿಮಾಗಳ ಬೆನ್ನಲ್ಲೇ ಡಬ್ಬಿಂಗ್ ಧಾರಾವಾಹಿಗಳ ಪರ್ವವೂ ಆರಂಭವಾಗಿದೆ. ಕನ್ನಡಿಗರು ಸೂಪರ್ ಧಾರಾವಾಹಿಗಳನ್ನು ಅದರ ಮೂಲ ಭಾಷೆಯ ಬದಲು ಕನ್ನಡದಲ್ಲೇ ನೋಡುವ ಅವಕಾಶ ಸಿಕ್ಕಿದೆ. ಪ್ರಮುಖವಾಗಿ, ಹಿಂದಿ, ತಮಿಳು ಮತ್ತು ತೆಲುಗಿನ ಪ್ರಸಿದ್ಧ ಧಾರಾವಾಹಿಗಳು ಕನ್ನಡ ಕಿತುತೆರೆಯಲ್ಲಿ ರಾರಾಜಿಸುತ್ತಿವೆ.

  ಡಬ್ಬಿಂಗ್ ಧಾರಾವಾಹಿ ನಿಷೇಧಿಸುವಂತೆ ಕಿರುತೆರೆ ಕಲಾವಿದರ ಮನವಿಡಬ್ಬಿಂಗ್ ಧಾರಾವಾಹಿ ನಿಷೇಧಿಸುವಂತೆ ಕಿರುತೆರೆ ಕಲಾವಿದರ ಮನವಿ

  ಅದ್ದೂರಿ ಹಿಂದಿ ಧಾರಾವಾಹಿಗಳನ್ನು ಕನ್ನಡದಲ್ಲಿ ನೋಡಿದ ಪ್ರೇಕ್ಷಕರು

  ಅದ್ದೂರಿ ಹಿಂದಿ ಧಾರಾವಾಹಿಗಳನ್ನು ಕನ್ನಡದಲ್ಲಿ ನೋಡಿದ ಪ್ರೇಕ್ಷಕರು

  ಹಿಂದಿಯಲ್ಲಿ ತಯಾರಾಗಿದ್ದ ಅದ್ದೂರಿ ವೆಚ್ಚದ ರಾಮಾಯಾಣ, ಮಹಾಭಾರತ ಧಾರಾವಾಹಿಗಳನ್ನು ಡಬ್ಬಿಂಗ್ ನಿಂದ ಕನ್ನಡಲ್ಲೇ ನೋಡಿ ಎಂಜಾಯ್ ಮಾಡಿದರು ಕಿರುತೆರೆ ಪ್ರೇಕ್ಷಕರು. ಈ ಧಾರಾವಾಹಿಗಳ ಜೊತೆಗೆ ಮುಖ್ಯವಾಗಿ, ಕನ್ನಡಗಿರದ್ದೇ ಆದ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಕನ್ನಡಿಗರು ನೋಡಿ ಆನಂದಿಸಿದ್ದಾರೆ. ಸಾಕಷ್ಟು ಧಾರಾವಾಹಿಗಳು ಕನ್ನಡಕ್ಕೆ ಲಗ್ಗೆ ಇಟ್ಟಿವೆ.

  ಕಡಿಮೆ ಖರ್ಚಿನಲ್ಲಿ ಜನರಿಗೆ ಉತ್ತಮ ಮನರಂಜನೆ

  ಕಡಿಮೆ ಖರ್ಚಿನಲ್ಲಿ ಜನರಿಗೆ ಉತ್ತಮ ಮನರಂಜನೆ

  ಒಂದೆಡೆ ಸಂತೋಷದ ವಿಚಾರವಾದರೆ ಮತ್ತೊಂದೆಡೆ ಆತಂಕದ ಪಡುವ ವಿತಾರ ಕೂಡ ಹೌದು. ಈಗಾಗಲೇ ಡಬ್ಬಿಂಗ್ ನಿಂದ ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಧಾರಾವಾಹಿಗಳ ಹಾವಳಿ ಜಾಸ್ತಿ ಆಗಿದೆ. ಕನ್ನಡದ ಮೂಲ ಧಾರಾವಾಹಿಗಳ ಸಂಖ್ಯೆಗಿಂತ ನಾವೇನು ಕಮ್ಮಿ ಇಲ್ಲ ಎನ್ನುವ ಹಾಗೆ ಡಬ್ಬಿಂಗ್ ಧಾರಾವಾಹಿಗಳು ಪೈಪೋಟಿ ನೀಡುತ್ತಿವೆ. ಇದಕ್ಕೆ ಮುಖ್ಯ ಕಾರಣ ಕಡಿಮೆ ಖರ್ಚು ಮತ್ತು ಯಾವುದೇ ಸಾಹಸ ಪಡಬೇಕಾಗಿಲ್ಲ. ಕಡಿಮೆ ಖರ್ಚಿನಲ್ಲಿ ಜನರಿಗೆ ಉತ್ತಮ ಮನರಂಜನೆ ನೀಡಲು ಸಾಧ್ಯ ಎಂದು ಕನ್ನಡ ಮನರಂಜನೆ ಮಾಹಿನಿಗಳು ಅರಿತುಕೊಂಡಿದ್ದಾರೆ.

  ಕನ್ನಡತನಕ್ಕೆ ಡಬ್ಬಿಂಗ್ ಕೊಡಲಿ: ಮುಖ್ಯಮಂತ್ರಿ ಚಂದ್ರುಕನ್ನಡತನಕ್ಕೆ ಡಬ್ಬಿಂಗ್ ಕೊಡಲಿ: ಮುಖ್ಯಮಂತ್ರಿ ಚಂದ್ರು

  ಡಬ್ಬಿಂಗ್ ಧಾರಾವಾಹಿ ನಿಷೇಧಿಸುವಂತೆ ಆರ್ ಅಶೋಕ್ ಬಳಿ ಮನವಿ

  ಡಬ್ಬಿಂಗ್ ಧಾರಾವಾಹಿ ನಿಷೇಧಿಸುವಂತೆ ಆರ್ ಅಶೋಕ್ ಬಳಿ ಮನವಿ

  ಲಾಕ್ ಡೌನ್ ಅವಧಿಯಲ್ಲಿ ಹೆಚ್ಚಾದ ಡಬ್ಬಿಂಗ್ ಧಾರಾವಾಹಿಗಳ ಹಾವಳಿಯಿಂದ ಆತಂಕಗೊಂಡ ಕನ್ನಡದ ಕಲಾವಿದರು, ತಂತ್ರಜ್ಞರಿಗೆ ಕೆಲಸವಿಲ್ಲದಂತಾಗಿದೆ. ಬಹುತೇಕ ಎಲ್ಲಾ ವಾಹಿನಿಗಳಲ್ಲಿ ಡಬ್ಬಿಂಗ್ ಧಾರಾವಾಹಿಗಳೂ ಪ್ರಸಾರ ಆರಂಭವಾಗಿದೆ. ಇದರಿಂದ ಆತಂಕಗೊಂಡ ಟಿವಿ ಕಲಾವಿದರ ಅಸೋಸಿಯೇಷನ್ ಸದಸ್ಯರು ಡಬ್ಬಿಂಗ್ ಧಾರಾವಾಹಿಗಳನ್ನು ನಿಷೇಧಿಸುವಂತೆ ಸಚಿವ ಆರ್. ಅಶೋಕ್ ಅವರನ್ನು ಭಾನುವಾರ ಭೇಟಿ ಮಾಡಿದ ಮನವಿ ಮಾಡಿಕೊಂಡಿದ್ದರು. ಕರ್ನಾಟಕದಲ್ಲಿ ಕನ್ನಡ ಕಲಾವಿದರಿಗೆ ಆದ್ಯತೆ ಸಿಗಬೇಕು, ಟಿವಿ ಕಲಾವಿದರು ಮತ್ತು ತಂತ್ರಜ್ಞರು ಕನ್ನಡ ಸಂಸ್ಕೃತಿಯ ರೂವಾರಿಗಳು. ಅವರು ನೆಲೆ ಕಳೆದುಕೊಳ್ಳುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

  ಡಬ್ಬಿಂಗ್ ಧಾರಾವಾಹಿ ಒಪ್ಪಿಕೊಂಡ ವೀಕ್ಷಕರು: ಹೆಚ್ಚಿದ ಟೆಲಿವಿಷನ್ ರೇಟಿಂಗ್ಡಬ್ಬಿಂಗ್ ಧಾರಾವಾಹಿ ಒಪ್ಪಿಕೊಂಡ ವೀಕ್ಷಕರು: ಹೆಚ್ಚಿದ ಟೆಲಿವಿಷನ್ ರೇಟಿಂಗ್

  ಡಬ್ಬಿಂಗ್ ವಿರುದ್ಧ ನಟ ಜಗ್ಗೇಶ್

  ಡಬ್ಬಿಂಗ್ ವಿರುದ್ಧ ನಟ ಜಗ್ಗೇಶ್

  ಡಬ್ಬಿಂಗ್ ಗೆ ಅವಕಾಶ ಕೊಟ್ಟಮೇಲೆ ಟಿವಿ ವಾಹಿನಿಗಳಲ್ಲಿ ಬರೀ ಪರಭಾಷೆ ಚಿತ್ರಗಳೇ ಪ್ರಸಾರವಾಗ್ತಿದೆ ಎಂದು ಹೇಳಿದ್ದಾರೆ. 'ನಮ್ಮ ಮಕ್ಕಳು ಡಿಸ್ಕವರಿ ಹಾಗೂ ಸೈನ್ಸ್ ಚಾನಲ್ ನೋಡಬಾರದೇ ಅಂತ ಹೇಳಿ ಡಬ್ಬಿಂಗ್ ತಂದ ಮಹನೀಯರ ಪಾದಕ್ಕೆ ನನ್ನ ನಮಸ್ಕಾರ. ಈಗ ಯಾವ ಚಾನಲ್‌ ನೋಡಿದ್ರೂ ತಮಿಳು, ತೆಲುಗು ಸಿನಿಮಾ ತುಂಬುತ್ತಿದ್ದೀರಾ, ನೀವು ಅಪ್ಪನಿಗೆ ಹುಟ್ಟಿದವರು, ಕನ್ನಡದವರಿಗೆ ಹುಟ್ಟಿದವರಾ, ನೀವೆಲ್ಲ ಕನ್ನಡ ದ್ರೋಹಿಗಳು, ನೀವೆಲ್ಲ ಹುಳ ಬಿದ್ದು ಸಾಯ್ತೀರಾ. ನಿಮ್ಮ ತೆವಲುಗಳಿಗಾಗಿ ಮುಂದಿನ ಪೀಳಿಗೆ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದೀರಾ' ಎಂದು ಜಗ್ಗೇಶ್ ಡಬ್ಬಿಂಗ್ ಧಾರಾವಾಹಿಗಳ ವಿರುದ್ಧ ಗುಡುಗಿದ್ದರು.

  #PowerOfYouth ಕರ್ನಾಟಕದ ಹುಡುಗಿಯರಿಗೆ ಚಾಲೆಂಜ್ ಹಾಕಿದ ಯುವರತ್ನ ಬೆಡಗಿ | Yuvarathnaa | Filmibeat Kannada
  ದೊಡ್ಡ ಸವಾಲು ಎದುರಾಗಿದೆ

  ದೊಡ್ಡ ಸವಾಲು ಎದುರಾಗಿದೆ

  ಎಷ್ಟೇ ವಿರೋಧ ವ್ಯಕ್ತವಾದರು ಡಬ್ಬಿಂಗ್ ಸಿನಿಮಾಗಳು ಮತ್ತು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇದರಿಂದ ಕಿರುತೆರೆ ಲೋಕ ದೊಡ್ಡ ಸವಾಲನ್ನು ಎದುರಿಸಬೇಕಾಗಿದೆ. ಡಬ್ಬಿಂಗ್ ಗೆ ಪೈಪೋಟಿ ನೀಡಲು ಉತ್ತಮ ಗುಣಮಟ್ಟದ, ಕಂಟೆಂಟ್ ಇರುವ ಧಾರಾವಾಹಿಗಳನ್ನು ನಿರ್ಮಾಣ ಮಾಡಬೇಕಿದೆ. ಡಬ್ಬಿಂಗ್ ಧಾರಾವಾಹಿಗಳ ಕಡೆ ವಾಲಿರುವ ಪ್ರೇಕ್ಷಕರ ಗಮನವನ್ನು ಮತ್ತೆ ಕನ್ನಡದ ಮೂಲ ಧಾರಾವಾಹಿಗಳ ಸೆಳೆಯಲು ಇರುವ ಒಂದೇ ದಾರಿ, ಗುಣಮಟ್ಟದ ಧಾರಾವಾಹಿಗಳನ್ನು ತಯಾರಿಸುವುದು.

  English summary
  2020 Flashback: Changes in Kannada television from dubbing serials.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X