X
ಆಚಾರ್ & ಕೋ
Drama | 28 Jul 2023 |
Kannada

ಆಚಾರ್ & ಕೋ ಕಥೆ

'ಆಚಾರ್ & ಕೋ' ಸಿನಿಮಾವನ್ನು ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ಈ ಸಿನಿಮಾ ಬಹುತೇಕ ಭಾಗಗಳಲ್ಲಿ ಹೆಚ್ಚಾಗಿ ಮಹಿಳೆಯರೇ ಕೆಲಸ ಮಾಡಿದ್ದಾರೆ. ಸಿನಿಮಾದ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಮುಖ್ಯ ಪಾತ್ರಧಾರಿ, ಸೌಂಡ್ ಇಂಜಿನಿಯರ್, ವಸ್ತ್ರ ವಿನ್ಯಾಸಕರು ಇನ್ನೂ ಹಲವು ವಿಭಾಗಗಳನ್ನು ಮಹಿಳೆಯರೇ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾದ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೆ ಸಿನಿಮಾದ ಲೇಖಕರು ಹಾಗೂ ನಿರ್ದೇಶಕಿಯೂ ಕೂಡ ಇವರೇ. 

ಈ ಸಿನಿಮಾವನ್ನು ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದಾರೆ. ಈ ಸಿನಿಮಾಗೆ ಬಿಂಧು ಮಾಲಿನಿ ನಾರಾಯಣಸ್ವಾಮಿ ಸಂಗೀತ ನೀಡಿದ್ದು, ಇಂಚರಾ ಸುರೇಶ್ ವಸ್ತ್ರ ವಿನ್ಯಾಸ, ಸೌಂಡ್ ಇಂಜಿನಿಯರ್ ಆಗಿ ಹೇಮಾ ಸುವರ್ಣ, ವಿಶ್ವಾಸ್ ಕಶ್ಯಪ್ ಆರ್ಟ್ ಡೈರೆಕ್ಷನ್ ಹಾಗೂ ಅಭಿಮನ್ಯು ಸದಾನಂದ್ ಛಾಯಾಗ್ರಹಣ ಮಾಡಿದ್ದಾರೆ. 


ಕಥೆ: ಬೆಂಗಳೂರಿನ ಜಯನಗರ ನಿವಾಸಿ ಸಿವಿಲ್ ಇಂಜಿನಿಯರ್ ಮಧುಸೂದನ್ ಆಚಾರ್(ಅಶೋಕ್). ಆತನ ಧರ್ಮಪತ್ನಿ ಸಾವಿತ್ರಿ ಆಚಾರ್(ಸುಧಾ ಬೆಳವಾಡಿ). ದಂಪತಿಗೆ ಒಬ್ಬರಲ್ಲ ಇಬ್ಬರಲ್ಲ 10 ಮಕ್ಕಳು.(ಮದುವೆ ಆಗಿ ಹೋಗಿರುವ ಮಗಳನ್ನು ಸೇರಿ ಮೂವರು ಗಂಡು ಮಕ್ಕಳು, 7 ಜನ ಹೆಣ್ಣುಮಕ್ಕಳು) ಮೂವರು ಗಂಡು ಮಕ್ಕಳು ಕೂಡ ಇಂಜಿನಿಯರ್ ಅನ್ನೋದು ಮಧುಸೂದನ್ ಆಚಾರ್ ಆಸೆ. ಬಹಳ ಸುಸಂಸ್ಕೃತರನ್ನಾಗಿ ಮಕ್ಕಳನ್ನು ಬೆಳೆಸುವ ಹಠ ಅಪ್ಪನದ್ದು. ಆದರೆ ಅದರಿಂದ ಹೊರ ಬಂದು ತಮ್ಮಗಿಷ್ಟ ಬಂದಿದ್ದು ಮಾಡಬೇಕು, ತಮ್ಮಿಷ್ಟದಂತೆ ಇರಬೇಕು ಅನ್ನೋದು ಮಕ್ಕಳ ಹಠ. ಆದರೆ ಇದ್ದಕ್ಕಿದಂತೆ ಒಂದು ದಿನ ಮಧುಸೂದನ್ ಆಚಾರ್ ಕೊನೆಯುಸಿರೆಳೆಯುತ್ತಾರೆ. ಪತಿ ಅಗಲಿಕೆ ಬಳಿಕ ಸಾವಿತ್ರಿ ದೇವರ ಧ್ಯಾನದಲ್ಲಿ ಮುಳುಗಿ ಬಿಡುತ್ತಾಳೆ. ಮನೆಯ ಆಧಾರ ಸ್ತಂಭವೇ ಕುಸಿದ ಮೇಲೆ ಮಕ್ಕಳೇ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿ ಬರುತ್ತದೆ. ಕೆಲಸ ಹುಡುಕಿ ಮನೆಯನ್ನು ನಡೆಸಬೇಕಾಗುತ್ತದೆ. ತಮ್ಮ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕಾಗುತ್ತದೆ. ತಮ್ಮ ಕನಸುಗಳನ್ನು ಬದಿಗಿಟ್ಟು ಮನೆಗಾಗಿ ಬದುಕಬೇಕಾದ ಅನಿವಾರ್ಯತೆ ಎದುರಾಗುತ್ತದೆ. ನಡೆಸಲು ಆ ಹಾದಿಯಲ್ಲಿ ಏನೆಲ್ಲಾ ಆಗುತ್ತದೆ? ಅನ್ನೋದನ್ನು ಹಾಸ್ಯಲೇಪನದೊಂದಿಗೆ ಕಟ್ಟಿಕೊಡಲಾಗಿದೆ.

ಬಿಡುಗಡೆ:  'ಆಚಾರ್ & ಕೋ' ಸಿನಿಮಾ ಜುಲೈ 28ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.  

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+