X
ಕನ್ನಡ » ಚಲಚಿತ್ರಗಳು » ಆಚಾರ್ & ಕೋ
ಆಚಾರ್ & ಕೋ

ಆಚಾರ್ & ಕೋ

Drama | 28 Jul 2023 |
Kannada

2.5 /5 Users

0 /5 Filmibeat

ಆಚಾರ್ & ಕೋ ಕಥೆ

'ಆಚಾರ್ & ಕೋ' ಸಿನಿಮಾವನ್ನು ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ಈ ಸಿನಿಮಾ ಬಹುತೇಕ ಭಾಗಗಳಲ್ಲಿ ಹೆಚ್ಚಾಗಿ ಮಹಿಳೆಯರೇ ಕೆಲಸ ಮಾಡಿದ್ದಾರೆ. ಸಿನಿಮಾದ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಮುಖ್ಯ ಪಾತ್ರಧಾರಿ, ಸೌಂಡ್ ಇಂಜಿನಿಯರ್, ವಸ್ತ್ರ ವಿನ್ಯಾಸಕರು ಇನ್ನೂ ಹಲವು ವಿಭಾಗಗಳನ್ನು ಮಹಿಳೆಯರೇ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾದ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೆ ಸಿನಿಮಾದ ಲೇಖಕರು ಹಾಗೂ ನಿರ್ದೇಶಕಿಯೂ ಕೂಡ ಇವರೇ.  ಈ ಸಿನಿಮಾವನ್ನು ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದಾರೆ. ಈ ಸಿನಿಮಾಗೆ ಬಿಂಧು ಮಾಲಿನಿ ನಾರಾಯಣಸ್ವಾಮಿ ಸಂಗೀತ ನೀಡಿದ್ದು, ಇಂಚರಾ ಸುರೇಶ್ ವಸ್ತ್ರ ವಿನ್ಯಾಸ, ಸೌಂಡ್ ಇಂಜಿನಿಯರ್ ಆಗಿ ಹೇಮಾ ಸುವರ್ಣ, ವಿಶ್ವಾಸ್ ಕಶ್ಯಪ್ ಆರ್ಟ್ ಡೈರೆಕ್ಷನ್ ಹಾಗೂ ಅಭಿಮನ್ಯು ಸದಾನಂದ್ ಛಾಯಾಗ್ರಹಣ ಮಾಡಿದ್ದಾರೆ.  ಕಥೆ: ಬೆಂಗಳೂರಿನ ಜಯನಗರ ನಿವಾಸಿ ಸಿವಿಲ್ ಇಂಜಿನಿಯರ್ ಮಧುಸೂದನ್ ಆಚಾರ್(ಅಶೋಕ್). ಆತನ ಧರ್ಮಪತ್ನಿ ಸಾವಿತ್ರಿ ಆಚಾರ್(ಸುಧಾ ಬೆಳವಾಡಿ). ದಂಪತಿಗೆ ಒಬ್ಬರಲ್ಲ ಇಬ್ಬರಲ್ಲ 10 ಮಕ್ಕಳು.(ಮದುವೆ ಆಗಿ ಹೋಗಿರುವ ಮಗಳನ್ನು ಸೇರಿ ಮೂವರು ಗಂಡು ಮಕ್ಕಳು, 7 ಜನ ಹೆಣ್ಣುಮಕ್ಕಳು) ಮೂವರು ಗಂಡು ಮಕ್ಕಳು ಕೂಡ ಇಂಜಿನಿಯರ್ ಅನ್ನೋದು ಮಧುಸೂದನ್ ಆಚಾರ್ ಆಸೆ. ಬಹಳ ಸುಸಂಸ್ಕೃತರನ್ನಾಗಿ ಮಕ್ಕಳನ್ನು ಬೆಳೆಸುವ ಹಠ ಅಪ್ಪನದ್ದು. ಆದರೆ ಅದರಿಂದ ಹೊರ ಬಂದು ತಮ್ಮಗಿಷ್ಟ ಬಂದಿದ್ದು ಮಾಡಬೇಕು, ತಮ್ಮಿಷ್ಟದಂತೆ ಇರಬೇಕು ಅನ್ನೋದು ಮಕ್ಕಳ ಹಠ. ಆದರೆ ಇದ್ದಕ್ಕಿದಂತೆ ಒಂದು ದಿನ ಮಧುಸೂದನ್ ಆಚಾರ್ ಕೊನೆಯುಸಿರೆಳೆಯುತ್ತಾರೆ. ಪತಿ ಅಗಲಿಕೆ ಬಳಿಕ ಸಾವಿತ್ರಿ ದೇವರ ಧ್ಯಾನದಲ್ಲಿ ಮುಳುಗಿ ಬಿಡುತ್ತಾಳೆ. ಮನೆಯ ಆಧಾರ ಸ್ತಂಭವೇ ಕುಸಿದ ಮೇಲೆ ಮಕ್ಕಳೇ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿ ಬರುತ್ತದೆ. ಕೆಲಸ ಹುಡುಕಿ ಮನೆಯನ್ನು ನಡೆಸಬೇಕಾಗುತ್ತದೆ. ತಮ್ಮ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕಾಗುತ್ತದೆ. ತಮ್ಮ ಕನಸುಗಳನ್ನು ಬದಿಗಿಟ್ಟು ಮನೆಗಾಗಿ ಬದುಕಬೇಕಾದ ಅನಿವಾರ್ಯತೆ ಎದುರಾಗುತ್ತದೆ. ನಡೆಸಲು ಆ ಹಾದಿಯಲ್ಲಿ ಏನೆಲ್ಲಾ ಆಗುತ್ತದೆ? ಅನ್ನೋದನ್ನು ಹಾಸ್ಯಲೇಪನದೊಂದಿಗೆ ಕಟ್ಟಿಕೊಡಲಾಗಿದೆ. ಬಿಡುಗಡೆ:  'ಆಚಾರ್ & ಕೋ' ಸಿನಿಮಾ ಜುಲೈ 28ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.  
Read More

ಆಚಾರ್ & ಕೋ ಕಲಾವಿದರು ಮತ್ತು ಸಿಬ್ಬಂದಿ

ಆಚಾರ್ & ಕೋ ಕ್ರೂ ಮಾಹಿತಿ

ನಿರ್ದೇಶಕ ಸಿಂಧು ಶ್ರೀನಿವಾಸ್ ಮೂರ್ತಿ
ಸಿನಿಮಾಟೋಗ್ರಫಿ ಅಭಿಮನ್ಯು ಸದಾನಂದನ್
ಸಂಪಾದಕ NA
ಸಂಗೀತ ಬಿಂದು ಮಾಲಿನಿ
ನಿರ್ಮಾಪಕ ಅಶ್ವಿನಿ ಪುನೀತ್ ರಾಜಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಆಚಾರ್ & ಕೋ ವಿಮರ್ಶಕರ ವಿಮರ್ಶೆ

kannada.filmibeat.com
60 ದಶಕದ ಕಥೆ ಚಿತ್ರದಲ್ಲಿ ಇದ್ದರೂ ಎಲ್ಲಾ ಕಾಲಕ್ಕೂ 'ಆಚಾರ್ & ಕೋ' ಸಿನಿಮಾ ಸಲ್ಲುವಂತದ್ದು. ಅಂದಿಗೂ ಇಂದಿಗೂ ಎಂದಿಗೂ ಇರುವಂತಹ ಕೆಲ ಸಮಸ್ಯೆಗಳ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ. ಎಲ್ಲೂ ಬೋರ್ ಹೊಡೆಸದಂತೆ, ಭಾಷಣದಂತೆಯೂ ಭಾಸವಾಗದಂತೆ ಮನರಂಜನೆ ಜೊತೆ ಜೊತೆಗೆ ಚರ್ಚಿಸುವಂತ, ಥಿಯೇಟರ್‌ನಿಂದ ಹೊತ್ತು ತರುವಂತಹ ಅಂಶಗಳು ಕೂಡ ಚಿತ್ರದಲ್ಲಿದೆ. ಇನ್ನು ಸ್ತ್ರೀಶಕ್ತಿಯ ಸಬಲೀಕರಣದ ವಿಚಾರವೂ ಚಿತ್ರವನ್ನು ಚಿತ್ರದಲ್ಲಿ ಚರ್ಚಿಸಲಾಗಿದೆ. 60 ವರ್ಷ ಹಿಂದೆ ಹೋಗಿ ಅಂದಿನ ಸಮಾಜ, ಜನ, ರೀತಿ ರಿವಾಜು, ಕಟ್ಟುಪಾಡು ಎಲ್ಲವನ್ನು ಕೆದಕಿ ನೋಡುವ ಪ್ರಯತ್ನ ಮಾಡಲಾಗಿದೆ.

ಆಚಾರ್ & ಕೋ ಟ್ರೇಲರ್

Video Thumbnail

ಆಚಾರ್ & ಕೋ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಆಚಾರ್ & ಕೋ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+