Kannada » Movies » Akira » Story

ಅಕಿರ (U/A)

ಪ್ರವರ್ಗ

Action

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

06 May 2016
ಕಥೆ

 'ಅಕಿರ' ಸಿನಿಮಾದಲ್ಲಿ ಅನೀಶ್ ಗೆ ಅದಿತಿ ರಾವ್ ಹಾಗೂ ಕೃಷಿತಾ ನಾಯಕಿಯರು. ಹಾಗಂತ ಇದು ತ್ರಿಕೋನ ಪ್ರೇಮಕಥೆ ಇರುವ ಚಿತ್ರ ಅಲ್ಲ. ಎರಡು ಲವ್ ಸ್ಟೋರಿ ಇರುವುದರಿಂದ ಇಬ್ಬರು ಹೀರೋಯಿನ್ ಗಳಿದ್ದಾರೆ ಅಷ್ಟೆ. ಸಿಕ್ಸ್ ಪ್ಯಾಕ್ ಆಬ್ಸ್ ಬಿಲ್ಡ್ ಮಾಡಿರುವ ಅನೀಶ್ ತೇಜೇಶ್ವರ್, 'ಅಕಿರ' ಚಿತ್ರದಲ್ಲಿ ಮೈನವಿರೇಳಿಸುವ ಆಕ್ಷನ್ ಮಾಡಿದ್ದಾರೆ.

ನಾರ್ವೆ ಸೇರಿದಂತೆ ಕಣ್ಣು ಕೋರೈಸುವ ಸುಂದರ ತಾಣಗಳಲ್ಲಿ 'ಅಕಿರ' ಚಿತ್ರೀಕರಣಗೊಂಡಿದೆ. ಸಖತ್ ರಿಚ್ ಆಗಿ ತಯಾರಾಗಿರುವ 'ಅಕಿರ' ಚಿತ್ರಕ್ಕೆ ಸೋಮಶೇಖರ ರೆಡ್ಡಿ ಬಂಡವಾಳ ಹೂಡಿದ್ರೆ, ನವೀನ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದ ಕಥೆ :

ವಿದೇಶದಲ್ಲಿ ಓದು ಮುಗಿಸಿ ವಾಪಸ್ ಬೆಂಗಳೂರಿಗೆ ಬಂದು, ಇಲ್ಲಿ ಹುಡುಗಿಯೊಬ್ಬಳ ಪ್ರೀತಿಯಲ್ಲಿ ಸಿಲುಕಿ, ಆಕೆಯಿಂದ ದೂರವಾಗಿ, ಆಕೆಯ ಬಾಲ್ಯ ಗೆಳತಿಯ ಕೈಗೆ ಸಿಕ್ಕಿ ಅವಳ ಪ್ರೀತಿ ಗಳಿಸಿ ಕೊನೆಗೆ ಇಬ್ಬರೂ ತನ್ನ ಜೀವನದಲ್ಲಿ ಇಲ್ಲ, ಎಲ್ಲವೂ ಖಾಲಿ ಖಾಲಿ ಎಂದು ಕೈ ಚೆಲ್ಲಿ ಕುಳಿತುಕೊಳ್ಳುವ ಶ್ರೀಮಂತ ಹುಡುಗ ಅಖಿಲ್ ರಾಜ್ (ಅನೀಶ್ ತೇಜೇಶ್ವರ್) ಸುತ್ತು ಸುತ್ತುವ ಇಡೀ ಕಥೆಯೇ 'ಅಕಿರ.