ರೆಬೆಲ್‌ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ `ಅಮರ್'ನ್ನು ಮೈನಾ ಖ್ಯಾತಿ ನಿರ್ದೇಶಕ ನಾಗಶೇಖರ್ ನಿರ್ದೆಶಿಸುತ್ತಿದ್ದಾರೆ. ಸಂದೇಶ್ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ.ಚಿತ್ರದ ಮೊದಲ ಟೀಸರ್ ಫೆಬ್ರವರಿ 14,2019 ರಂದು ಬಿಡುಗಡೆಯಾಯಿತು.
'ಅಮರ್' ಒಂದು ಪಕ್ಕಾ ಲವ್ ಸ್ಟೋರಿ ಸಿನಿಮಾ. ಅಮರ್ (ಅಭಿಷೇಕ್) ಮತ್ತು ಬಾರ್ಬಿ (ತಾನ್ಯಾ) ಇಬ್ಬರ ನಡುವೆ ಮೊದಲು ವಿರಸ ಬಳಿಕ ಪ್ರೀತಿ ಅರಳುತ್ತದೆ. ಮದುವೆ ಆಗುವ ಸಮಯದಲ್ಲಿ ಬಾರ್ಬಿ ಯನ್ನು ಅಮರ್ ಬಿಟ್ಟು ಹೋಗುತ್ತಾನೆ. ಪ್ರೀತಿಸಿದ್ದ ಹುಡುಗಿಯನ್ನು ಕೈ ಹಿಡಿದು ಕಾಪಾಡಬೇಕಿದ್ದ ಅಮರ್ ಏಕೆ ಅರ್ಧದಲ್ಲಿ ಬಿಟ್ಟು ಹೋಗುತ್ತಾನೆ?, ಕೊನೆಗೆ ಈ ಜೋಡಿ ಒಂದಾಗುತ್ತದೆಯೇ ಎನ್ನುವುದೇ ಸಿನಿಮಾ.