X
ಅನಂತು v/s ನುಸ್ರತ್
Romance | 28 Dec 2018 | U |
Kannada

ಅನಂತು v/s ನುಸ್ರತ್ ಕಥೆ

ಭಿನ್ನ ಧರ್ಮ ಮತ್ತು ವಿಭಿನ್ನ ಅಭಿರುಚಿಯುಳ್ಳವರಾದ ಅನಂತು (ವಿನಯ್ ರಾಜಕುಮಾರ್) ಮತ್ತು ನುಸ್ರತ್‌ರ (ಲತಾ ಹೆಗೆಡೆ) ಪ್ರೇಮವನ್ನು ಮತ್ತು ಒಂದು ವಿಚ್ಚೇದನ ಪ್ರಕರಣದ ಹಿಂದಿರುವ ಹಲವು ಆಯಾಮಗಳನ್ನು ಈ ಚಿತ್ರ ತೆರೆದಿಡುತ್ತದೆ. ಸಂಪ್ರದಾಯಸ್ಥ ಕುಟುಂಬಗಳಿಂದ ಬಂದಿರುವ ನಾಯಕ ಮತ್ತು ನಾಯಕಿ ಮಧ್ಯೆ ಇರುವ ಒಂದೇ ಒಂದು ಸಾಮ್ಯತೆಯೆಂದರೆ ಇಬ್ಬರು ಲಾ ವಿಧ್ಯಾರ್ಥಿಗಳು. ಅನಂತು ನುಸ್ರತ್‌ಳ ಪ್ರೇಮದಲ್ಲಿ ತೇಲಾಡಲು ಬಯಸಿದರೆ ,ನುಸ್ರತ್ ಅನಂತುವಿನ ಏಕಮುಖ ಪ್ರೇಮದ ಬಂಧನದಲ್ಲಿ ಬೀಳದೇ ಮುಂದುವರೆಯುತ್ತಾಳೆ.

ನಂತರ ತಮ್ಮ ತಮ್ಮ ಹಾದಿಯಲ್ಲಿ ಸಾಗುತ್ತಿದ್ದ ಇವರನ್ನು ಮತ್ತೆ ವಿಧಿ ಒಂದೇ ಕೋರ್ಟ್ ರೂಮಿನಲ್ಲಿ ಸೇರಿಸುತ್ತದೆ. ಕೋರ್ಟ್ ರೂಮಿನಲ್ಲಿ ಲಾಯರ್ ಆಗಿ ಅನಂತು ಮತ್ತು ಚಿಕ್ಕ ವಯಸ್ಸಿನ ನ್ಯಾಯಾಧೀಶೆಯಾಗಿ ನುಸ್ರತ್ ಎದುರಾಗುತ್ತಾರೆ. ಯಾವ ಪ್ರಕರಣ ಇವರನ್ನು ಎದಿರು-ಬದಿರು ತಂದಿತು , ಆ ಪ್ರಕರಣಕ್ಕಿರುವ ವಿಭಿನ್ನ ಆಯಾಮಗಳೇನು ಎಂಬುದು ಚಿತ್ರದ ಮೂಲ ಕಥೆ.

ಸುಧೀರ್ ಶಾನಭೋಗ ನಿರ್ದೇಶನದ ಈ ಚಿತ್ರದಲ್ಲಿ ವಿನಯ ರಾಜಕುಮಾರ್ ಕ್ಲಾಸಿ ಅವತಾರದೊಂದಿಗೆ ಸೂಕ್ಷಮತಿ ಲಾಯರ್ ಮತ್ತು ಯುವಪ್ರೇಮಿಯಾಗಿ ಮನೋಘ್ನವಾಗಿ ಅಭಿನಯಿಸಿದ್ದಾರೆ.

ಚಿತ್ರದ ಮುಹೂರ್ತ ಸೆಪ್ಟೆಂಬರ್ 4,2017 ರಂದು ನೇರವೇರಿತು. ಮಾಣಿಕ್ಯ ಪ್ರೊಡಕ್ಷನ್ಸ್್ನಲ್ಲಿ ತಯಾರಾದ ಈ ಚಿತ್ರವನ್ನು ಸುಧೀರ್ ಶಾನಭೋಗ ನಿರ್ದೇಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+