ಅಂಜನಿಪುತ್ರ....ತುಂಬು ಕುಟುಂಬದ ಕಥೆ. ನಾವು ಯಾರ ತಂಟೆಗೂ ಹೋಗುವುದಿಲ್ಲ ನಮ್ಮ ಕುಟುಂಬದ ತಂಟೆಗೆ ಬಂದರೆ ಸುಮ್ಮನೇ ಇರುವುದಿಲ್ಲ ಎಂಬ ಮಾತು ಈ ಚಿತ್ರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತೆ. ಸಮಾಜದ ಮುಂದೆ ಮುಖವಾಡ ಹಾಕಿಕೊಂಡು ಮೋಸ ಮಾಡುತ್ತಿದ್ದ ಖಳನಾಯಕನನ್ನ ಹೇಗೆ ನಾಶ ಮಾಡುತ್ತಾನೆ ಎನ್ನುವ ಸಿಂಪಲ್ ಕತೆಯೇ 'ಅಂಜನಿಪುತ್ರ'.
ಚಿತ್ರದ ನಾಯಕ ವಿರಾಜ್ ಯಾವುದೋ ಸಣ್ಣ ಕಾರಣಕ್ಕಾಗಿ ತಾಯಿಯಿಂದ ದೂರವಾಗಿ ಬೆಂಗಳೂರಿನ ಮಾರುಕಟ್ಟೆಯ ಸಣ್ಣ ಮನೆಯಲ್ಲಿ ವಾಸವಿರುತ್ತಾನೆ. ಅನಿರೀಕ್ಷಿತವಾಗಿ ನಾಯಕಿಯ ಭೇಟಿಯಾಗಿ ಮೊದಲ ನೋಟದಲ್ಲಿ ಪ್ರೀತಿ ಹುಟ್ಟುತ್ತೆ. ತಾನೇ ಪ್ರೀತಿ ಹೇಳಿಕೊಳ್ಳಬೇಕು ಅನ್ನುವ ಮುಂಚೆಯೇ ನಾಯಕಿ ಮನದಲ್ಲೂ ನಾಯಕ ವಿರಾಜ್ ಮೇಲೆ ಪ್ರೀತಿ ಆಗುತ್ತೆ. ನಾಯಕ ಮನೆಯವರ ಜೊತೆಯಿಲ್ಲದೇ ಇರುವುದನ್ನೇ ಕಾದಿದ್ದ ಖಳನಾಯಕ ಬೈರವ, ಹೀರೋ ತಾಯಿ ಹಾಗೂ ಹಳ್ಳಿಯವರಿಗೆ ತೊಂದರೆ ಕೊಡಲು ಪ್ರಾರಂಭಿಸುತ್ತಾನೆ. ಕಷ್ಟದ ಸಮಯದಲ್ಲಿ ತಾಯಿ ಅಂಜನಾದೇವಿಯ ಸಹಾಯಕ್ಕೆ ಬರುವನೇ ಅಂಜನಿಪುತ್ರ.
ರೀ-ರೀಲಿಸ್: ಅಂಜನಿ ಪುತ್ರ ಸಿನಿಮಾ 2024ರ ಮೇ 10ರಂದು ಚಿತ್ರಮಂದಿರಗಳಲ್ಲಿ ರೀ-ರೀಲಿಸ್ ಆಗಲಿದೆ.