ಈ ಹಾರರ್ ಚಿತ್ರದಲ್ಲಿ ನಾಯಕಿ ಅಮೃತಾ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿಧಿಯ ಆಸೆಗಾಗಿ ಒಂದು ಅಮಾಯಕ ಹುಡುಗಿಯನ್ನು ಬಲಿಕೊಡಲು ಹೋದಾಗ ಒಂದು ಹಳೆ ಸಾಮ್ರಾಜ್ಯದ ಕಥೆ ತೆರೆದುಕೊಳ್ಳುತ್ತದೆ.ಆಗ ತಾನೇ ಮದುವೆಯಾದ ಅರ್ಜುನ್ ಮತ್ತು ಅಮೃತಾ ತಮ್ಮ ಹನಿಮೂನ್ ಗೆಂದು ಒಂದು ಗೆಸ್ಟ್ ಹೌಸ್ ಬುಕ್ ಮಾಡಿರುತ್ತಾರೆ. ಆದರೆ ಸುಖಮಯವಾಗಬೇಕಿದ್ದ ಮೊದಲ ರಾತ್ರಿ ಹಲವು ಭಯಾನಕ ಘಟನೆಗಳ ಮೂಲಕ ಅವರ ಪಾಲಿಗೆ ನರಕಮಯವಾಗುತ್ತದೆ. ಆ ಮನೆಯಲ್ಲಿ ಹಲವು ದುಷ್ಟ ಆತ್ಮಗಳು ಸೇರಿಕೊಂಡಿರುತ್ತವೆ . ಅರ್ಜುನ್ ಮತ್ತು ಅಮೃತಾ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದರೂ ಆ ಆತ್ಮಗಳು ತಡೆಯೊಡ್ಡುತ್ತವೆ. ಈ ಹೋರಾಟದಲ್ಲಿ ಅಮೃತಾ ಮಡಿಯುತ್ತಾಳೆ. ಅಲ್ಲಿಂದ ಚಿತ್ರ ಇನ್ನೊಂದು ಘಟ್ಟಕ್ಕೆ ಹೋಗುತ್ತದೆ. ಧರ್ಮದುರ್ಗ ಸಾಮ್ರಾಜ್ಯವನ್ನು ಆಳಿದ ಅನುಷ್ಕರಾಣಿ ಎಂಬ ರಾಣಿಯ ಆತ್ಮದ ಕತೆಯು ಚಿತ್ರದಲ್ಲಿ ಸೇರುತ್ತದೆ.