ಶಿವ ಮೂಲತಃ ಬಹು ಬೇಗನೇ ಕೋಪಗೊಳ್ಳುವ ಸ್ವಭಾವ ಹೊಂದಿದ ವ್ಯಕ್ತಿ. ಇದೇ ಕಾರಣಕ್ಕಾಗಿ ಶಿವನ ಅಜ್ಜ , ಇವನಿಗೆ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪದೇ ಪದೇ ಉಪದೇಶ ಮಾಡುತ್ತಿರುತ್ತಾರೆ. ಅಜ್ಜನ ಮರಣದ ನಂತರ ಶಿವ ಬೇರೆ ಊರಿಗೆ ಪ್ರಯಾಣ ಬೆಳೆಸುತ್ತಾನೆ. ಶಿವ ಹೊಟ್ಟೆಪಾಡಿಗಾಗಿ ಹುಲಿವೇಷ ಹಾಕಿ ಬದುಕು ನೆಡೆಸುತ್ತಿರುತ್ತಾನೆ. ಒಂದು ದುರದೃಷ್ಟಕರ ಘಟನೆಯಿಂದ ಆತ ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತಾನೆ.
ಇನ್ನೊಂದು ಕಡೆ ಕರಾವಳಿಯ ಹಳ್ಳಿಯೊಂದರಲ್ಲಿ ಕರ್ಣ (ಧನಂಜಯ) ಊರಿನ ಜನರಿಗೆಲ್ಲಾ ಸಹಾಯ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾನೆ. ಹೆಣ್ಣುಮಕ್ಕಳನ್ನು ಯಾರಾದರೂ ಚುಡಾಯಿಸಿದರೂ ಆತ ಸಹಿಸಲಾರ. ಶಿವಪ್ಪ ಮತ್ತು ಕರ್ಣ ಮುಖಾಮುಖಿಯಾಗುತ್ತಾರೆ. ಇವರಿಬ್ಬರಲ್ಲಿ ಯಾರು ಒಳ್ಳೆಯವರು ಮತ್ತು ಯಾರು ಕೆಟ್ಟವರು ಎಂಬುವುದು ಚಿತ್ರದ ಕಥೆ.