ಬರ್ಬರಿಕ ಕನ್ನಡ ಸಿನಿಮಾವನ್ನು ಶಾಂಡಿಲ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸ್ಕಂದ ಅಶೋಕ್ ನಾಯಕನಾಗಿ ಹಾಗೂ ಸಿರಿ ರಾಜು ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ಬಿ.ಎಂ ವೆಂಕಟೇಶ್, ಯಮುನಾ ಶ್ರೀನಿಧಿ, ಬಾಲಾ ರಾಜ್ವಾಡಿ, ಚಿರಾಗ್, ಮಡಿವಾಳಯ್ಯ ಮುಂತಾದವರು ತಾರಾಗಣದಲ್ಲಿದ್ದಾರೆ. ಎ.ಟಿ.ರವೀಶ್ ಸಂಗೀತಾ ಹಾಗೂ ಕೆ.ವಿ ಇಂದ್ರಜಿತ್ ಛಾಯಾಗ್ರಹಣ ಚಿತ್ರಕ್ಕಿದೆ.
ಕಥೆ: ಅಸ್ಪತ್ರೆ ಮತ್ತು ಶಿಕ್ಷಣ ವ್ಯವಸ್ಥೆಯ ಅಂಶಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಹಣದ ಸಮಸ್ಯೆಯಿಂದಾಗಿ ಅನಿವಾರ್ಯವಾಗಿ ಕೊಲೆಗಾರನಾಗಿ, ಮುಂದೆ ಸರಣಿ ಹಂತಕನಾಗಿ, ನಂತರ ಬದುಕಿನಲ್ಲಿ ಬದಲಾಗುವ ಹುಡುಗನೊಬ್ಬನ ಕಥೆ ಸಿನಿಮಾದಲ್ಲಿದೆ.