ಬಯಲುಸೀಮೆ ಸಿನಿಮಾವನ್ನು ವರುಣ್ ಕಟ್ಟಿಮನಿ ನಿರ್ದೇಶಿಸಿ, ನಟಿಸಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆಯಿರುವ ಈ ಚಿತ್ರದಲ್ಲಿ ಸಂಯುಕ್ತಾ ಹೊರನಾಡು ನಾಯಕಿಯಾಗಿ ಅಭಿಯಿಸಿದ್ದಾರೆ. ಉಳಿದಂತೆ ಆರ್ಮಿಗಂ ರವಿಶಂಕರ್, ಭವಾನಿ ಪ್ರಕಾಶ್, ಟಿ.ಎಸ್.ನಾಗಭರಣ, ಯಶ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ್ ಭಟ್, ಪ್ರದೀಪ್ ರಾಜ್ ಮುಂತಾದವರು ತಾರಾಗಣದಲ್ಲಿದ್ದಾರೆ. ಗಾಯಿತ್ರಿದೇವಿ ಕ್ರಿಯೇಷನ್ಸ್ ಮತ್ತು ಪಿಆರ್‌ಎಸ್ ಕ್ರಿಯೇಷನ್ ಅಡಿ ಈ ಸಿನಿಮಾವನ್ನು ಲಕ್ಷ್ಮಣ್ ಸಾ ಶಿಂಗ್ರಿ, ಶ್ರೀಧರ್ ಬಿದರಹಳ್ಳಿ, ರಶ್ಮಿ ವರುಣ್ ಜೊತೆಯಾಗಿ ನಿರ್ಮಿಸಿದ್ದಾರೆ. ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ ಮತ್ತು ಮಾನಸ ಹೊಳ್ಳ ಛಾಯಾಗ್ರಹಣ ಚಿತ್ರಕ್ಕಿದೆ.