ಭೈರವನ ಕೊನೆ ಪಾಠ ಸಿನಿಮಾಕ್ಕೆ ಹೇಮಂತ್ ರಾವ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ವಿಜೆಎಫ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ವೈಶಾಕ್ ಜೆ ಗೌಡ ಬಂಡವಾಳ ಹೂಡುತ್ತಿದ್ದಾರೆ. 4 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಭೈರವನ ಕೊನೆ ಪಾಠ' ಮೂಡಿಬರಲಿದ್ದು, ಭಾರೀ ಬಜೆಟ್ಟಿನ ಬಹಳ ದೊಡ್ಡ ಸ್ಕೇಲ್ ಸಿನಿಮಾ ಇದಾಗಿದೆ.
ಭೈರವನ ಕೊನೆ ಪಾಠ ಸಿನಿಮಾದ ಪೋಸ್ಟರ್‌ನಲ್ಲಿ ಬೆಟ್ಟ.. ಆ ಬೆಟ್ಟದ ನಡುವೆ ಅರಳಿದ ಹೂವು.. ಸುತ್ತಾ ಭೂಮಿಗಿಳಿದ ಬಾಣಗಳು. ಇನ್ನು ಟೈಟಲ್ ಹಿಂದೆ ಇರುವ ಗರುಡ ಚಿತ್ರ. ಇದನ್ನೆಲ್ಲಾ ಗಮನಿಸಿದರೆ ಇದೊಂದು ಪೀರಿಯಡ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಅನ್ನೋದು ಗೊತ್ತಾಗುತ್ತಿದೆ. ಶಿವಣ್ಣನ ಹುಟ್ಟುಹಬ್ಬದ ದಿನ ಬರುವ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಇನ್ನಷ್ಟು ಮಾಹಿತಿ ಸಿಗಲಿದೆ.