twitter

    ಭಜರಂಗಿ 2 ಕಥೆ

    ಭಜರಂಗಿ ಮತ್ತು ವಜ್ರಕಾಯ ಚಿತ್ರಗಳ ನಂತರ ಹರ್ಷ ಮತ್ತು ಶಿವರಾಜಕುಮಾರ್ ಮೂರನೇ ಬಾರಿಗೆ ಒಂದುಗೂಡಿರುವ ಚಿತ್ರ ಭಜರಂಗಿ 2. ಜಯಣ್ಣ ಮತ್ತು ಭೋಗೇಂದ್ರ `ಜಯಣ್ಣ ಫಿಲಂಸ್' ಅಡಿಯಲ್ಲಿ ಈ ಚಿತ್ರ ಮೂಡಿ ಬಂದಿದೆ. ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ. ಸ್ವಾಮಿ ಜೆ ಗೌಡ ರ ಛಾಯಗ್ರಹಣವಿರುವ ಈ ಚಿತ್ರದ ಸಂಕಲನವನ್ನು ದೀಪು ಎಸ್ ಕುಮಾರ್ ರವರು ಮಾಡಿದ್ದಾರೆ. ಚಿತ್ರದಲ್ಲಿ ಜಾಕಿ ಭಾವನಾ ನಾಯಕಿಯಾಗಿ ನಟಿಸಿದ್ದಾರೆ.

    ಕಥೆ: ಹಳ್ಳಿಯೊಂದರಲ್ಲಿ ಬಡ್ಡಿ ವಸೂಲಿ ಮಾಡಿಕೊಂಡು ಊರಿಗೆ ಮಾರಿ ಎನ್ನುವಂತೆ ಬದುಕುತ್ತಿರುವ ಅಕ್ಕನ ಮುದ್ದಿನ ತಮ್ಮ ದೂರದ ದೇಶದಿಂದ, ಮದುವೆ ಮಾಡಿಕೊಳ್ಳಲು ಬರುತ್ತಾನೆ. ಅವನೇ ಆಂಜಿ. ಈ ಆಂಜಿ ಕಟುಕ ಆಚರಣೆಗಳನ್ನು ತಡೆದು ಮಾನವೀಯತೆಯೇ ಶ್ರೇಷ್ಠ ಎಂಬ ಸಂದೇಶ ಸಾರುತ್ತಾನೆ. ಈ ನಡುವೆ ಅಲ್ಲೊಂದು ಪ್ರೇಮ ಕಥೆಯೂ ನಡೆದು ಹೋಗತ್ತದೆ. ಆದರೆ, ಸಾಮಾನ್ಯ ಆಂಜಿಯನ್ನು ಹೊಡೆದುರುಳಿಸಲು ಕಾಡಿನಿಂದ ರಾಕ್ಷಸ ಎಂಟ್ರಿ ಕೊಡುತ್ತಾನೆ. ರಾಕ್ಷಸನ ಕ್ರೌರ್ಯದ ಮುಂದೆ ಸೋತು ಆಂಜಿ ಪ್ರಾಣ ಕಳೆದು ಕೊಳ್ಳುತ್ತಾನೆ.
    ಚಿತ್ರದ ನಾಯಕನೇ ಸತ್ತು ಹೋದನಲ್ಲ ಎಂದುಕೊಳ್ಳುವಷ್ಟರಲ್ಲಿ, ಭಜರಂಗಿಯ ಎಂಟ್ರಿಯಾಗುತ್ತದೆ. ದುರಳರ ಅಟ್ಟಹಾಸಕ್ಕೆ ಸೆಡ್ಡು ಹೊಡೆಯುವ ಭಜರಂಗಿಗೂ, ಆಂಜಿಗೂ ಏನು ಸಂಬಂಧ? ಈ ಭಜರಂಗಿ ಯಾರು? ರಾಕ್ಷಸರ ಅಟ್ಟಹಾಸವನ್ನು ಭಜರಂಗಿ ಹೇಗೆ ತಡೆಯುತ್ತಾನೆ ಎಂಬುದು ಚಿತ್ರದ ಕಥೆ.

    ಚಿತ್ರದ ಮೊದಲ ಭಾಗದ ಶೂಟಿಂಗ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆಡೆದರೆ, ಮುಂದಿನ ಹಂತದಶೂಟಿಂಗ್ ಶಿವಮೊಗ್ಗ ಮತ್ತು ಸಕ್ರೆಬೈಲ್ ನಲ್ಲಿ ನಡೆಯಿತು..ಚಿತ್ರದ ಮೋಷನ್ ಪೋಸ್ಟರ್ 2020 ಜನೇವರಿ 14 ರಂದು ಬಿಡುಗಡೆಯಾಯಿತು.ಚಿತ್ರದ ಟೀಸರ್ ಶಿವಣ್ಣ ಜನ್ಮದಿನ ಪ್ರಯುಕ್ತ ಜುಲೈ 12, 2020 ಯಂದು ಬಿಡುಗಡೆಯಾಯಿತು. ಚಿತ್ರ ಆಕ್ಟೋಬರ್ 29, 2021 ರಂದು ಬಿಡುಗಡೆಯಾಯಿತು. ಅದೇ ಶಿವರಾಜಕುಮಾರ್ ಕಿರಿಯ ಸಹೋದರ ಮತ್ತು ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ್ ನಿಧನರಾಗಿದ್ದರಿಂದ ಚಿತ್ರದ ಪ್ರದರ್ಶನಗಳು ರದ್ದಾದವು.
    **Note:Hey! Would you like to share the story of the movie ಭಜರಂಗಿ 2 with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X