ಭರ್ಜರಿ ಗಂಡು ಸಿನಿಮಾವನ್ನು
ಪ್ರಸಿದ್ಧ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ
ಕಿರಣ್ ರಾಜ್ ನಾಯಕನಾಗಿ ಹಾಗೂ
ಯಶಾ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಾಕೇಶ್ ರಾಜ್, ಸುರೇಖಾ ವೆಂಕಟೇಶ್, ರಮೇಶ್ ಭಟ್, ಸೌರಭ್ ಕುಲಕರ್ಣಿ, ನಿಸರ್ಗ ಲಕ್ಷ್ಮಣ್, ನಾಗೇಶ್ ರೋಹಿತ್, ವೀಣಾ ಸುಂದರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಗುಮಿನೇನಿ ವಿಜಯ್ ಬಾಬು ಸಂಗೀತ ಹಾಗೂ ಕಿಟ್ಟಿ ಕೌಶಿಕ್ ಛಾಯಾಗ್ರಹಣ ಸಿನಿಮಾಗಿದೆ. ಅನಿಲ್ ಕುಮಾರ್ ಮತ್ತು ಮದನ್ ಗೌಡ ಈ ಚಿತ್ರವನ್ನು ಫೇಮಸ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ಭರ್ಜರಿ ಗಂಡು ಸಿನಿಮಾ 2024ರ ಏಪ್ರಿಲ್ 5ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.