ಎಂ.ಜಿ.ಶ್ರೀನಿವಾಸ ನಟಿಸಿ ನಿರ್ದೇಶಿಸಿರುವ `ಬೀರ್‌ಬಲ್ ಟ್ರಯಾಲಜಿ' ಮೂರು ಚಿತ್ರಗಳ ಸರಣಿಯಾಗಿದ್ದು , 2019 ಜನೇವರಿ 18 ರಂದು ಮೊದಲ ಭಾಗವಾದ ಫೈಂಡಿಂಗ್ ವಜ್ರಮುನಿ ಬಿಡುಗಡೆಯಾಗಲಿದೆ. ಈ ಚಿತ್ರ ಸರಣಿಯಲ್ಲಿ ಎರಡನೇ ಭಾಗ ``ಅವರನ್ನ ಬಿಟ್ಟ ಇವರನ್ನ ಬಿಟ್ಟ ಅವರ‍್ಯಾರು'' ಮತ್ತು ಮೂರನೇ ಭಾಗ ``ತುರೇಮಣೆ'' ಎಂಬ ಹೆಸರಿನಲ್ಲಿ ಬರಲಿದೆ.ಒಂದು ಕೊಲೆಯ ಸುತ್ತ ನಡೆಯುವ ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿದೆ. ಕೊಲೆಗೆ ಜಾಡನ್ನು ಹಿಡಿದು ಹೊರಡುವ ತಂಡ ಕೊಲೆಗೆ ಇರುವ ಹಲವು ಆಯಾಮಗಳನ್ನು ಪರಿಶೀಲಿಸುತ್ತದೆ.
ಕಥೆ
ಒಂದು ಸಣ್ಣ ಅಪಘಾತ ನಡೆದು ರಸ್ತೆಯಲ್ಲಿರುವ ಒಬ್ಬ ಹುಡುಗ ಕೆಳೆಗೆ ಬೀಳುತ್ತಾನೆ. ರಸ್ತೆಗೆ ಬಿದ್ದ ಹುಡುಗ ಮೇಲೆಳುವ ಹೊತ್ತಿಗೆ ಒಂದು ಕೊಲೆ ಆಗಿದ್ದನ್ನು ನೋಡುತ್ತಾನೆ. ಬಳಿಕ ಪೊಲೀಸರಿಗೆ ಪೋನ್ ಮಾಡುತ್ತಾನೆ. ಆದರೆ ಪೊಲೀಸರು ಅದೇ ಹುಡುಗನ ಮೇಲೆ ಕೋಲೆ ಕೇಸ್ ಕಟ್ಟಿ ಜೈಲಿಗೆ ಹಾಕುತ್ತಾರೆ. ಆ ಅಮಾಯಕ ಹುಡುಗನಿಗೆ ಶಿಕ್ಷೆ ಆಗುತ್ತದೆ. ಆದರೆ, 8 ವರ್ಷದ ಬಳಿಕ ಕೇಸ್ ಓಪನ್ ಮಾಡಲಾಗುತ್ತದೆ. ಲಾಯರ್ ಮಹೇಶ್ ದಾಸ್ (ಶ್ರೀನಿ) ಆ ಹುಡುಗನನ್ನು ನಿರಪರಾಧಿ ಎಂದು ಸಾಬೀತು ಮಾಡಲು ಹೊರಡುತ್ತಾನೆ. ಹೀಗಿರುವಾಗ, ಹೇಗೆ ಆ ಹುಡುಗ ತಪ್ಪು ಮಾಡಿಲ್ಲ ಎಂದು ಮಹೇಶ್ ದಾಸ್ ನಿರೂಪಿಸುತ್ತಾನೆ. ಹಾಗಾದ್ರೆ, ನಿಜವಾಗಿಯೂ ಆ ಕೊಲೆ ಮಾಡಿದವರು ಯಾರು?, ಮಹೇಶ್ ದಾಸ್ ಯಾಕೆ ಈ ಕೇಸ್ ತೆಗೆದುಕೊಳ್ಳುತ್ತಾನೆ ಎನ್ನುವುದು ಚಿತ್ರದ ಜೀವಾಳವಾಗಿದೆ.
ಪ್ರತಿಯೊಂದು ಕೊಲೆಯ ಹಿಂದೆ ಇರುವ ಮೂರು ದೃಷ್ಡಿಕೋನಗಳಾದ ಯಾರು ಕೊಲೆ ಮಾಡಿದರು? ಏಕೆ ಕೊಲೆ ಮಾಡಿದರು? ಮತ್ತು ಹೇಗೆ ಕೊಲೆ ಮಾಡಿದರು? ಎಂಬ ಮೂರು ದೃಷ್ಟಿಕೋನಗಳಾಚೆ ಚಿತ್ರ ನಮ್ಮನ್ನು ಕರೆದೊಯ್ಯುತ್ತದೆ.
ಚಿತ್ರ ವಿಶೇೆೆಷ
1. ಬೀರಬಲ್ ಟ್ರಯಾಲಜಿ ಚಿತ್ರ ಕನ್ನಡದ ಮೊದಲ ಟ್ರಯಾಲಜಿ ಚಿತ್ರವಾಗಲಿದೆ.
2. ಈ ಚಿತ್ರದಲ್ಲಿ ಒಂದು ಹಾಡನ್ನು 8D ಯಲ್ಲಿ ಚಿತ್ರೀಕರಿಸಿದ್ದಾರೆ.
3. ಚಿತ್ರದ VFX ನ್ನು ಕೆನಡಾದಲ್ಲಿ ಮಾಡಲಾಗಿದೆ..