ರತ್ನನ್ ಪ್ರಪಂಚದಲ್ಲಿ ಉಡಾಳ್ ಬಾಬು ಆಗಿ ಸಿನಿ ಪ್ರೇಕ್ಷಕರ ಮನಗೆದ್ದ ಸ್ಯಾಂಡಲ್ವುಡ್ನ ಪ್ರತಿಭಾನ್ವಿತ ನಟ ಪ್ರಮೋದ್, ‘ಬಾಂಡ್ ರವಿ’ಯಾಗಿ ತೆರೆ ಮೇಲೆ ಬರೋಕೆ ಸಜ್ಜಾಗಿದ್ದಾರೆ. ಈ ಚಿತ್ರದ ಇಂಟ್ರಸ್ಟಿಂಗ್ ಹಾಗೂ ಅಷ್ಟೇ ಖಡಕ್ ಆದ ಟೀಸರ್ ಬಿಡುಗಡೆಯಾಗಿದೆ. ಇದರಲ್ಲಿ ಪ್ರಮೋದ್ ಖಡಕ್ ಅಂಡ್ ಮಾಸ್ ಆಕ್ಟಿಂಗ್ ಎಲ್ಲರ ಗಮನ ಸೆಳೆಯುತ್ತಿದೆ.
ಬಾಂಡ್ ರವಿ ಆಕ್ಷನ್ ಲವ್ ಸ್ಟೋರಿ ಸಿನಿಮಾ. ಪ್ರಜ್ವಲ್ ಎಸ್.ಪಿ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನರಸಿಂಹಮೂರ್ತಿ ಲೈಫ್ ಲೈನ್ ಫಿಲಂ ಬ್ಯಾನರ್ ಅಡಿ ಬಾಂಡ್ ರವಿ ಸಿನಿಮಾಗೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚಿತ್ರದಲ್ಲಿ ಅಪ್ಪು ಅಭಿಮಾನಿಯಾಗಿ ಪ್ರಮೋದ್ ನಟಿಸಿದ್ದು ,ಇವರಿಗೆ ಜೋಡಿಯಾಗಿ ಕಾಜಲ್ ಕುಂದರ್ ತೆರೆ ಹಂಚಿಕೊಂಡಿದ್ದಾರೆ.
ಕಥೆ: ಬಾಂಡ್ ರವಿ ಓರ್ವ ಪ್ರಾಮಾಣಿಕ ಲವರ್. ಜೊತೆಗೆ ನಿಯತ್ತಾಗಿರುವ ಖತರ್ನಾಕ್ರೌಡಿ ಕೂಡ ಹೌದು. ಒಂದೇ ಒಂದು ಕೇಸಲ್ಲಿ ಸಿಲುಕಿಕೊಳ್ಳದ ಬುದ್ದಿವಂತ ಕೂಡ. ಆದರೆ, ನಂತರ ರವಿ ಜೀವನದಲ್ಲಿ ಜೈಲೇ ಎಲ್ಲ. ಅಲ್ಲಿರುವವರೇ ಎಲ್ಲ ಆಗಿಬಿಡುತ್ತಾರೆ. ಈ ಸಂದರ್ಭದಲ್ಲಿ ರವಿ ಬಾಳಲ್ಲಿ ಶ್ವೇತಾ ಎಂಟ್ರಿಯಾಗುತ್ತದೆ. ಲೋನ್ ಕೊಡಲೆಂದು ರವಿಗೆ ಕರೆ ಮಾಡಿದ ಶ್ವೇತಾ ನಂತರ ಲವರ್ ಆಗುತ್ತಾಳೆ. ನಂತರ ಹಲವು ತಿರುವುಗಳು ಬರುತ್ತವೆ ಇದು ಸಿನಿಮಾದ ಕಥೆ.